HEALTH TIPS

ಕೆ.ಸುಧಾಕರನ್ ಜತೆಗಿನ ಭಿನ್ನಾಭಿಪ್ರಾಯ, ಹದಗೆಟ್ಟ ಕಾಂಗ್ರೆಸ್: ಪಕ್ಷ ತೊರೆದ ಕಾಸರಗೋಡಿನ ಹಿರಿಯ ಕಾಂಗ್ರೆಸ್ಸ್ ಮುಖಂಡ ಸಿ.ಕೆ. ಶ್ರೀಧರನ್


                ಕಾಸರಗೋಡು: ಪಕ್ಷದ ರಾಜ್ಯಾಧ್ಯಕ್ಷ ಕೆ.ಸುಧಾಕರನ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಶ್ರೀಧರನ್ ಪಕ್ಷ ತೊರೆದಿದ್ದಾರೆ.
               ಕಾಸರಗೋಡು ಜಿಲ್ಲಾ ಕಾಂಗ್ರೆಸ್ಸ್ ನ ಮಾಜಿ ಅಧ್ಯಕ್ಷರೂ ಆಗಿರುವ ಅಡ್ವ. ಶ್ರೀಧರನ್ ಸಿಪಿಎಂ ಸೇರಲು ನಿರ್ಧರಿಸಿದ್ದಾರೆ. 17ರಂದು ಸುದ್ದಿಗೋಷ್ಠಿ ನಡೆಸುವುದಾಗಿಯೂ ತಿಳಿಸಲಾಗಿದೆ.
           ಕಾಂಗ್ರೆಸ್ ಪಕ್ಷ ಹದಗೆಟ್ಟಿದೆ ಎಂದು ಪ್ರತಿಭಟಿಸಿ ರಾಜೀನಾಮೆ ನೀಡಿದ್ದಾರೆ. ಹಲವು ವಿಚಾರಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್ ನಾಯಕತ್ವ ತಳೆದಿರುವ ನಿಲುವುಗಳೊಂದಿಗೆ ಭಿನ್ನಾಭಿಪ್ರಾಯವೇ ಪಕ್ಷ ತೊರೆಯಲು ಪ್ರಮುಖ ಕಾರಣವಾಗಿದೆ. ಫ್ಯಾಸಿಸಂ ವಿರುದ್ಧ ಎಡಪಕ್ಷಗಳೊಂದಿಗೆ ಕೆಲಸ ಮಾಡುತ್ತೇನೆ. ಬೆಂಬಲಿಗರೂ ತನ್ನೊಂದಿಗೆ ಇರುತ್ತಾರೆ. ಯಾವುದೇ ಷರತ್ತುಗಳಿಲ್ಲದೆ ಸಿಪಿಎಂ ಸೇರುತ್ತಿರುವುದಾಗಿಯೂ ಶ್ರೀಧರನ್ ತಿಳಿಸಿದ್ದಾರೆ.
              ಶನಿವಾರ ಕಾಞಂಗಾಡ್‍ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸಿ.ಕೆ. ಶ್ರೀಧರನ್ ಅವರನ್ನು ಪಕ್ಷಕ್ಕೆ ಸ್ವಾಗತಿಸುವರೆಂದು ವರದಿಯಾಗಿದೆ. ಟಿಪಿ ಚಂದ್ರಶೇಖರನ್ ಹತ್ಯೆ ಪ್ರಕರಣದಲ್ಲಿ ಶ್ರೀಧರನ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.
             ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶ್ರೀಧರನ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ, ಅವರು ಸಿಪಿಎಂ ಸೇರಲು ನಿರ್ಧರಿಸಿದರು ಎಂಬ ವದಂತಿಗಳಿವೆ, ಆದರೆ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
            ಈ ಹಿಂದೆ ಸಿಕೆ ಶ್ರೀಧರನ್ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದರು. ಅವರು 1977 ರಿಂದ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದ್ದಾರೆ. 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತ್ರಿಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಇ.ಕೆ.ನಾಯನಾರ್ ವಿರುದ್ಧ ಸ್ಪರ್ಧಿಸಿದ್ದರು. ಭಾರಿ ಬಹುಮತದಿಂದ ಸೋಲು ಕಂಡಿದ್ದರು. ಅವರು ಪ್ರಮುಖ ವಕೀಲರಲ್ಲೊಬ್ಬರಾಗಿದ್ದು, ಕಾಂಗ್ರೆಸ್ ಪರವಾಗಿ ಹಲವು ಪ್ರಕರಣಗಳನ್ನು ವಾದಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries