ಪಾಲಕ್ಕಾಡ್: ಆರೆಸ್ಸೆಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಿ ಎ ರವೂಫ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ 25ರಂದು ಎನ್‍ಐಎ ಬಂಧಿಸಿ ಜೈಲಿನಲ್ಲಿರುವ ಆರೋಪಿಯನ್ನು ಕೇರಳ ಪೆÇಲೀಸರು ವಶಕ್ಕೆ ಪಡೆದಿದ್ದು, ಡಿಸೆಂಬರ್ 5ರವರೆಗೆ ಕಸ್ಟಡಿ ಅವಧಿ ಇದೆ.ರವೂಫ್ ಪ್ರಕರಣದ ಸಂಚಿನಲ್ಲಿ ಭಾಗವಹಿಸಿದ್ದ 41ನೇ ಆರೋಪಿ.
ಕೊಲೆಗೆ ಸಂಬಂಧಿಸಿದಂತೆ ಪೆÇಲೀಸರು ಭಾನುವಾರ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಪಾಲಕ್ಕಾಡ್ ಸಂಖುವಾರತೋಟ್ ಮೂಲದ ರಾಬರ್ಟ್ ಕಾಜ ಅಲಿಯಾಸ್ ಕಾಜಾ ಹುಸೇನ್ ಬಂಧಿತ ಆರೋಪಿ. ಆರೋಪಿ ಪಿಎಫ್ ಐ ಏರಿಯಾ ಕಾರ್ಯದರ್ಶಿ. ಇದರೊಂದಿಗೆ ಪ್ರಕರಣದ ಆರೋಪಿಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಈ ಪೈಕಿ 37 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ.
ಶ್ರೀನಿವಾಸನ್ ಹತ್ಯೆ; ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ಪೋಲೀಸ್ ವಶಕ್ಕೆ
0
ನವೆಂಬರ್ 28, 2022