ಭಾರತದ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿ ಇಲ್ಲದೆ ಬಹುತೇಕ ಅಡುಗೆ ರುಚಿಸುವುದೇ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಬೆಳ್ಳುಳ್ಳಿಯನ್ನು ಬಳಸದೇ ಅಡುಗೆಯೇ ಆಗುವುದಿಲ್ಲ ಎನ್ನುವವರೇ ಹೆಚ್ಚು. ಅತಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಈರುಳ್ಳಿಯಷ್ಟೇ ಆದ್ಯತೆ ಬೆಳ್ಳುಳ್ಳಿಗೂ ಇದೆ. ಏಷ್ಯನ್ ಮಾತ್ರವಲ್ಲದೆ ಆಫ್ರಿಕನ್, ಯುರೋಪಿಯನ್ ಮತ್ತು ಅಮೇರಿಕನ್ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಕಟುವಾದ ಪರಿಮಳ ಅಡುಗೆಗೆ ಉತ್ತಮ ಘಮಲಿನ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ, ಇದು ಹಲವಾರು ಅಡುಗೆಗೆ ಬಹಳ ಮುಖ್ಯವಾದ ವಸ್ತುವಾಗಿದೆ. ಇಂಥಾ ಬೆಳ್ಳುಳ್ಳಿಯಲ್ಲು ಹಲವಾರು ವಿಧಗಳಿವೆ.
ಬೆಳ್ಳುಳ್ಳಿಯಲ್ಲು ವಿಧಗಳೇ ಎಂದರೆ ಹೌದು ವಿಧ ಅಲ್ಲದೆ ಬಣ್ಣಗಳೂ ಇದೆ. ಇದರ ಬಣ್ಣಗಳನ್ನು ಆಧರಿಸಿ ಇದನ್ನು ವಿಂಗಡಿಸಲಾಗುತ್ತದೆ. ಬೇರೆ ಬೇರೆ ದೇಶ ಒಂದು ಅಗ್ಗದ ಪದಾರ್ಥವಾಗಿದ್ದು, ಭಕ್ಷ್ಯಗಳನ್ನು ಸುವಾಸನೆ ಮಾಡಲು ಬಳಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿ ಬರುತ್ತದೆ ಮತ್ತು ಬಲ್ಬ್ ರೂಪದಲ್ಲಿ ಬೆಳೆಯುತ್ತದೆ. ಕೆಲವು ಜನಪ್ರಿಯ ಬೆಳ್ಳುಳ್ಳಿ ವಿಧಗಳು ಇಲ್ಲಿವೆ