ಕಾಸರಗೋಡು: ನೆಹರು ಯುವ ಕೇಂದ್ರ ಕಾಸರಗೋಡು, ಯುವಜನ ಕಲ್ಯಾಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯೂತ್ ಕ್ಲಬ್‍ಗಳಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆರೋಗ್ಯ, ಪರಿಸರ, ಸ್ವಚ್ಛತೆ, ಸಾಮಾಜಿಕ ಜಾಗೃತಿ, ಕಲೆ ಮತ್ತು ಕ್ರೀಡಾ ಸಾಹಸ ಕಾರ್ಯಕ್ರಮಗಳನ್ನು ನಡೆಸಿದ, ಮಳೆನೀರು ಕೊಯ್ಲು, ಫಿಟ್ ಇಂಡಿಯಾ ಫ್ರೀಡಂ ರನ್ ಅಭಿಯಾನ ಇತ್ಯಾದಿ ಕ್ಷೇತ್ರಗಳಲ್ಲಿ 2021 ಎಪ್ರಿಲ್ 1 ರಿಂದ 2022 ಮಾರ್ಚ್ 31ರ ತನಕ ವಿವಿಧ ಸಂಘಟನೆಗಳು ನಡೆಸಿರುವ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿಯು ಪ್ರಶಸ್ತಿಯನ್ನು ನೀಡಲಿದೆ.
ಜಿಲ್ಲಾ ಮಟ್ಟದ ಪ್ರಶಸ್ತಿಯು 25000 ರೂಪಾಯಿ ಹಾಗೂ ಪ್ರಶಸ್ತಿ ಪತ್ರ. ಜಿಲ್ಲಾ ಮಟ್ಟದ ವಿಜೇತರಿಗೆ ರಾಜ್ಯ ಮಟ್ಟದಲ್ಲಿಯೂ ರಾಜ್ಯ ಮಟ್ಟದ ವಿಜೇತರಿಗೆ ರಾಷ್ಟ್ರ ಮಟ್ಟದಲ್ಲಿಯೂ ಸ್ಪರ್ಧಿಸುವ ಅವಕಾಶವಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಶಸ್ತಿ ಪಡೆದವರು ಅರ್ಜಿ ಸಲ್ಲಿಸಬೇಕಾಗಿಲ್ಲ. ನಿರ್ದಿಷ್ಟ ಮಾದರಿಯಲ್ಲಿ ತಯಾರಿಸಿದ ಫಾರ್ಮ್ ಭರ್ತಿ ಮಾಡಿ ಭಾವಚಿತ್ರ, ವಿಡಿಯೋ, ವೃತ್ತಪತ್ರಿಕೆ ಕಟಿಂಗ್‍ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಡಿಟ್ ಮಾಡಿದ ಆದಾಯ ಮತ್ತು ವೆಚ್ಚದ ಹೇಳಿಕೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್ 12 ಆಗಿದ್ದು, ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆಗಾಗಿ ನೆಹರು ಯುವ ಕೇಂದ್ರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಇಮೇಲ್ (ಜಥಿಛಿ.ಞಚಿsಚಿಡಿgoಜ@gmಚಿiಟ.ಛಿom). ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(7736426247, 9633939185, 7012172158)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅತ್ಯುತ್ತಮ ಯೂತ್ ಕ್ಲಬ್‍ಗಳಿಗೆ ಪ್ರಶಸ್ತಿ-ಅರ್ಜಿ ಆಹ್ವಾನ
0
ನವೆಂಬರ್ 27, 2022