ಕಾಸರಗೋಡು: ಮಂಜೇಶ್ವರ ಉಪಜಿಲ್ಲಾ ಶಾಲಾ ಕ್ರೀಡೋತ್ಸವ ನ. 3ರಿಂದ 5ರ ವರೆಗೆ ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿರುವುದು.
ಮಂಜೇಶ್ವರ ಉಪಜಿಲ್ಲೆಯ ಎಲ್.ಪಿ, ಯು.ಪಿ, ಪ್ರೌಢಶಾಲೆ ಹಾಗೂ ಹೈಯರ್‍ಸೆಕೆಂಡರಿ ಶಾಲೆಗಳನ್ನೊಳಗೊಂಡ 123ಶಾಲೆಗಳಿಂದ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು. ನ. 4ರಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕ್ರೀಡಾಕೂಟ ಔಪಚಾರಿಕವಗಿ ಉದ್ಘಾಟಿಸುವರು. ವರ್ಕಾಡಿ ಗ್ರಾ.ಪಂ ಅಧ್ಯಕ್ಷೆ ಭಾರತೀ ಅಧ್ಯಕ್ಷತೆ ವಹಿಸುವರು.
ಕೊಡ್ಲಮೊಗರಿನಲ್ಲಿ ಇಂದಿನಿಂದ ಮಂಜೇಶ್ವರ ಉಪಜಿಲ್ಲಾ ಶಾಲಾ ಕ್ರೀಡಾಕೂಟ
0
ನವೆಂಬರ್ 02, 2022
Tags