ಕಾಸರಗೋಡು: ಜನರ ಸಹಭಾಗಿತ್ವಕ್ಕೆ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉತ್ತಮ ಉದಾಹರಣೆ ಎಂದು ಸಂಸದ ರಾಜಮೋಹನ್ ಉನ್ನಿಥಾನ್ ತಿಳಿಸಿದರು. ಅವರು ತಿರುವನಂತಪುರದಲ್ಲಿ ನಡೆಯಲಿರುವ 27ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಚಾರಾರ್ಥ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಟೂರಿಂಗ್ ಟಾಕೀಸ್ ಚಲನಚಿತ್ರ ವಾಹನದ ಪರ್ಯಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್ ಎ ನೆಲ್ಲಿಕುನ್ ಹಾಗೂ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಪ್ರದರ್ಶನ ಉದ್ಘಾಟಿಸಿದರು. ಚಲನಚಿತ್ರ ಅಕಾಡೆಮಿ ಸದಸ್ಯ ಪ್ರದೀಪ್ ಚೋಕ್ಲಿ, ಕಾಲೇಜು ಪ್ರಾಂಶುಪಾಲೆ ಡಾ.ಎಂ.ರಮಾ, ಚಲನಚಿತ್ರ ಅಕಾಡೆಮಿ ಪ್ರಾದೇಶಿಕ ಸಂಯೋಜಕ ಪಿ.ಕೆ.ಬೈಜು, ಕಾಲೇಜು ಉಪ ಪ್ರಾಂಶುಪಾಲ ಲಿಯಾಕತ್ ಅಲಿ, ಚಲನಚಿತ್ರ ಅಕಾಡೆಮಿ ಕಾರ್ಯಕಾರಿ ಮಂಡಳಿ ಸದಸ್ಯ ಪ್ರಕಾಶ್ ಶ್ರೀಧರ್, ಕಾಸರಗೋಡು ಜನಪರ ಫಿಲಂ ಸೊಸೈಟಿ ಅಧ್ಯಕ್ಷ ಮಧು ಎಸ್ ನಾಯರ್, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ, ಯುಯುಸಿ ಅಭಿನವ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಕಾಲೇಜು ಫಿಲಂ ಕ್ಲಬ್ ಸಂಚಾಲಕಿ ಡಾ.ಎ.ವಿ.ಸುಜಾತಾ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು ಪುಸ್ತಕ ಮೇಳ ಆಯೋಜಿಸಲಾಗಿತ್ತು.
ಯಾತ್ರೆ ಆರಂಭ:
27 ನೇ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಚಾರಾರ್ಥ ಕೇರಳ ಚಲನಚಿತ್ರ ಅಕಾಡೆಮಿಯ ಟೂರ್ಸ್ ಟಾಕೀಸ್‍ನ ಫಿಲ್ಮ್ ವಾಹನ ಕಾಸರಗೋಡಿನಿಂದ ತನ್ನ ಪ್ರಯಾಣ ಪ್ರಾರಂಭಿಸಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವ ಟೂರಿಂಗ್ ಟಾಕೀಸ್ ವಾಹನ ವಿವಿಧ ಕೇಂದ್ರಗಳಲ್ಲಿ ಚಲನಚಿತ್ರ ಪ್ರದರ್ಶನ ಏರ್ಪಡಿಸಲಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ವಿದೇಶಿ ಭಾಷೆಯ ಚಿತ್ರಗಳು ಉಪಶೀರ್ಷಿಕೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಟೂರಿಂಗ್ ಟಾಕೀಸ್ ಮೂಲಕ ಮಲಯಾಳ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಕಣ್ಣೂರು ಜಿಲ್ಲೆಗೆ ಪ್ರವೇಶಿಸುವ ಪ್ರವಾಸಿ ಟಾಕೀಸ್ ಎರಡು ದಿನಗಳಲ್ಲಿ ಆರು ಚಲನಚಿತ್ರ ಪ್ರದರ್ಶನಗಳನ್ನು ಪ್ರದರ್ಶಿಸಲಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಟೂರಿಂಗ್ ಟಾಕೀಸ್ ಚಲನಚಿತ್ರ ವಾಹನ ಪರ್ಯಟನೆಗೆ ಚಾಲನೆ
0
ನವೆಂಬರ್ 16, 2022
Tags