ನಾಗ್ಪುರ: ನಾಗ್ಪುರ ಮೆಟ್ರೊದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿದೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅವರ ಅನುಕೂಲಗಳಿಗೆ ತಕ್ಕಂತೆ ಮೆಟ್ರೊ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ.
ಸ್ವಾತಂತ್ರ್ಯ ದಿನಾಚರಣೆಯಂದು 90,758 ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಈ ವರೆಗಿನ ಗರಿಷ್ಠ ಸಂಖ್ಯೆ ಇದಾಗಿದೆ. ದಸರಾ ಸಂದರ್ಭದಲ್ಲಿ 83,876 ಮಂದಿ ಹಾಗೂ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯ ನಡೆದ ದಿನ 80,794 ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಈ ದಿನ ಮೆಟ್ರೊವು ತನ್ನ ಎಂದಿನ ಮುಕ್ತಾಯ ಸಮಯ ರಾತ್ರಿ 10 ಗಂಟೆಯನ್ನೂ ಮೀರಿ, ಓಡಾಟ ನಡೆಸಿತ್ತು. ಪ್ರತಿ ದಿನ ನಾಗ್ಪುರ ಮೆಟ್ರೊದಲ್ಲಿ 70 ಸಾವಿರ ಮಂದಿ ಪ್ರಯಾಣಿಸುತ್ತಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ ನಾಗ್ಪುರ ಮೆಟ್ರೊ, ಬೆಳಿಗ್ಗೆ 6.15ರಿಂದ ರಾತ್ರಿ 10ರವರೆಗೆ ಓಡಾಟ ನಡೆಸುತ್ತಿದೆ. ವಿಶೇಷ ದಿನಗಳಲ್ಲಿ ಈ ಸಮಯದಲ್ಲಿ ಬದಲಾವಣೆಯನ್ನೂ ಮಾಡಲಾಗುತ್ತದೆ.