ಮಂಜೇಶ್ವರ: ಕನಿಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಹಾಗೂ ಪೋಷಕರ ದಿನಾಚರಣೆ ಇತ್ತೀಚೆಗೆ ಜರಗಿತು. ಮಂಜೇಶ್ವರ ಪೋಲೀಸ್ ಠಾಣಾಧಿಕಾರಿ ರಿಜಿತ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಮಾರಂಭ ಉದ್ಘಾಟಿಸಿದರು. ಶಾಲಾ ನಾಯಕ ಮಾಸ್ಟರ್ ರಿಷಬ್ ಠಾಣಾಧಿಕಾರಿಗಳಿಗೆ ಕ್ರೀಡಾಜ್ಯೋತಿ ಹಸ್ತಾಂತರಿಇಸ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಈಲ್ಲಾ ಪಂಚಾಯತಿ ಸದಸ್ಯೆ ರಾಧಾ ಶಾಲಾ ಧ್ವಜಾರೋಹಣಗೈದರು. ಶಾಲಾ ವಿದ್ಯಾರ್ಥಿಗಳಿಂದ ಕವಾಯತು, ಪ್ರತಿಜ್ಞಾ ಸ್ವೀಕಾರ ನಡೆಯಿತು.
ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ದೇವದಾಸ್, ಕಾರ್ಯದರ್ಶಿ ವಿಜಯ ಕನಿಲ, ಖಜಾಂಜಿ ರಾಜೇಂದ್ರ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ ಸಾಲಿಯಾನ್, ಪದ್ಮನಾಭ ಕಡಪ್ಪರ, ಸುರೇಶ್, ಮನೋಜ್, ಸಂಚಾಲಕ ದಯಾನಂದ್, ವ್ಯವಸ್ಥಾಪಕ ಮನೋಜ್, ಪ್ರಾಂಶುಪಾಲೆ ಮಂಜುಳ ಪಿ.ವಿ. ಉಪಸ್ಥಿತರಿದ್ದರು. ಸಹಶಿಕ್ಷಕಿ ಮಮತ ಎನ್. ಸ್ವಾಗತಿಸಿ, ವಿನಯ ಪಿ ವಂದಿಸಿದರು. ಸಹ ಪ್ರಾಂಶುಪಾಲೆ ಮಾಲತಿ ಕಾರ್ಯಕ್ರಮ ನಿರೂಪಿಸಿದರು.
ಕನಿಲದಲ್ಲಿ ವಾರ್ಷಿಕ ಕ್ರೀಡೋತ್ಸವ-ಪೋಷಕರ ದಿನಾಚರಣೆ
0
ನವೆಂಬರ್ 10, 2022
Tags