ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನ್ ಶ್ರೀಹರನ್ ಮತ್ತು ಆರ್.ಪಿ.ರವಿಚಂದ್ರನ್ ಅವರನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ತರ ಆದೇಶ ನೀಡಿದೆ.
ಇವರಿಬ್ಬರೂ ಅವಧಿಪೂರ್ವ ಬಿಡುಗಡೆಗಾಗಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ, ಈ ಹಿಂದೆ ಬಿಡುಗಡೆಗೊಂಡಿದ್ದ ಎ.ಜಿ.ಪೆರರಿವಳನ್ ಪ್ರಕರಣದಲ್ಲಿನ ಆದೇಶವೇ ಇಲ್ಲಿಗೂ ಅನ್ವಯವಾಗುತ್ತದೆ ಎಂದಿದೆ.
ಸಂವಿಧಾನದ ವಿಧಿ 142ರ ಅಡಿಯಲ್ಲಿನ ತನ್ನ ಪರಮಾಧಿಕಾರ ಚಲಾಯಿಸಿರುವ ಸುಪ್ರೀಂಕೋರ್ಟ್, ಮೇ.18ರಂದು 30 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಪೆರರಿವಳನ್ ಅವರ ಬಿಡುಗಡೆಗೆ ಆದೇಶಿಸಿತ್ತು.
ಮೇ.21,1991ರಂದು ತಮಿಳುನಾಡಿನ ಶ್ರೀ ಪೆರಂಬದೂರಿನ ರಾಜಕೀಯ ಸಮಾವೇಶದ ವೇಳೆ ಆತ್ಮಹತ್ಯಾ ದಾಳಿಯಲ್ಲಿ ರಾಜೀವ್ ಗಾಂಧಿಯವರನ್ನು ಹತ್ಯೆಗೈಯ್ಯಲಾಗಿತ್ತು.