ಕಾಸರಗೋಡು: ಕಣ್ಣೂರಿನಲ್ಲಿ ಆರು ವರ್ಷದ ಬಾಲಕನನ್ನು ಕಾರಿನ ಮೇಲೆ ಕೂತ iÀುುವಕನೊಬ್ಬನನ್ನು ಎಸೆದ ಘಟನೆಯ ಆಘಾತ ಮಾಸುವ ಮುನ್ನವೇ ಕಾಸರಗೋಡು ಕುಂಜತ್ತೂರಲ್ಲೂ ಅಂತಹದೊಂದು ಅಮಾನುಷ ಘಟನೆ ನಡೆದಿದೆ.
ರಸ್ತೆಬದಿಯಲ್ಲಿ ನಿಂತಿದ್ದ ಒಂಬತ್ತು ವರ್ಷದ ಮದರಸಾ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಎತ್ತಿ ನೆಲಕ್ಕೆ ಎಸೆದಿದ್ದಾನೆ. ಘಟನೆಯಲ್ಲಿ ಮಂಜೇಶ್ವರ ಕುಂಜತ್ತೂರು ಮೂಲದ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಉದ್ಯಾವರದಲ್ಲಿ ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆ ಬದಿ ತನ್ನ ಸ್ನೇಹಿತರೊಂದಿಗೆ ನಿಂತಿದ್ದ ವಿದ್ಯಾರ್ಥಿನಿಯನ್ನು ಯಾವುದೇ ಪ್ರಚೋದನೆ ಇಲ್ಲದೆ ಎತ್ತಿ ನೆಲಕ್ಕೆ ಎಸೆದಿದ್ದಾನೆ. ನಿಧಾನವಾಗಿ ಮಗುವಿನ ಕಡೆಗೆ ನಡೆದ ನಂತರ, ಆಕೆಯನ್ನೆತ್ತಿ ನೆಲದ ಮೇಲೆ ಎಸೆದನು. ಆ ನಂತರ ಏನೂ ಆಗಿಲ್ಲ ಎಂಬಂತೆ ಹಿಂದೆ ಸರಿದರು. ಮಗುವನ್ನು ತಜ್ಞ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಮಗುವಿನ ಪೋಷಕರು ದೂರು ದಾಖಲಿಸಿದ ನಂತರ ಪೋಲೀಸರು ತನಿಖೆ ಆರಂಭಿಸಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಮದರಸಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಎಂದು ವರದಿಯಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಬೆಳಗ್ಗೆ ಹೇಳಿದ್ದಾರೆ. ವಿದ್ಯಾರ್ಥಿಯನ್ನು ಘಾಸಿಗೊಳಿಸಿದ ಘಟನೆಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಯಾಕಾಗಿ ಹೀಗಾಯಿತು ಎಂದು ತನಿಖೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕುಂಜತ್ತೂರಲ್ಲಿ ಅಮಾನುಷ ಘಟನೆ: ಒಂಭತ್ತರ ಹರೆಯದ ಬಾಲಕಿಯನ್ನು ಎತ್ತಿ ನೆಲಕ್ಕೆಸೆದು ರಾಕ್ಷಸೀಯ ಪ್ರವೃತ್ತಿ: ಧೂರ್ತನ ಬಂಧನ
0
ನವೆಂಬರ್ 17, 2022