ಕಾಸರಗೋಡು: ನೀಲೇಶ್ವರಂ ಇಎಂಎಸ್ ಕ್ರೀಡಾಂಗಣದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾ ಮೇಳದಲ್ಲಿ ಚೆರುವತ್ತೂರು ಶೈಕ್ಷಣಿಕ ಉಪ ಜಿಲ್ಲೆ 179 ಅಂಕಗಳೊಂದಿಗೆ ಪ್ರಥಮ ಹಾಗೂ ಚಿತ್ತಾರಿಕಲ್ ಉಪಜಿಲ್ಲೆ 174 ಅಂಕಗಳೊಂದಿಗೆ ದ್ವಿತೀಯ ಸಥಾನ ಪಡೆದುಕೊಂಡಿತು. ಹೊಜದುರ್ಗ ಜಿಲ್ಲೆ 128 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಮಡಿತು.
ಕಾಸರಗೋಡು ಜಿಲ್ಲೆ 98 ಅಂಕ, ಕುಂಬಳ 87, ಬೇಕಲ್ 70 ಮತ್ತು ಮಂಜೇಶ್ವರಂ 38 ಅಂಕ ಪಡೆದುಕೊಂಡಿತು.
ಸಮಾರೋಪ ಸಮಾರಂಭವನ್ನು ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ ಶಾಂತ ಉದ್ಘಾಟಿಸಿದರು. ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಸಮಿತಿ ಪ್ರಧಾನ ಸಂಚಾಲಕ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕ(ಡಿಡಿಇ)ಸಿ.ಕೆ.ವಾಸು, ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಟಿ.ಪಿ.ಲತಾ, ನಗರಸಭೆ ಸದಸ್ಯರಾದ ವಿ.ವಿ. ಸತಿ, ಪಿ.ಭಾರ್ಗವಿ, ಇ.ಶಾಜೀರ್, ಎರುವಾಟ್ ಮೋಹನನ್, ನಗರಸಭೆ ಮಾಜಿ ಸದಸ್ಯ ಪಿ. ಮನೋಹರನ್, ಸಂಘಟನಾ ಸಮಿತಿ ಉಪಾಧ್ಯಕ್ಷ ನೀಲೇಶ್ವರಂ ರಾಜಾಸ್ ಎಚ್‍ಎಸ್‍ಎಸ್ ಪಿಟಿಎ ಅಧ್ಯಕ್ಷ ಮಡಿಯನ್ ಉಣ್ಣಿಕೃಷ್ಣನ್, ಪ್ರಶಾಂತ್ ಕಾನತ್ತೂರ್ ಉಪಸ್ಥಿತರಿದ್ದರು. ಎರಡು ದಿನಗಳ ಕಾಳ ನಡೆದ ಕ್ರೀಡಾಕೂಟದಲ್ಲಿ ಏಳು ಉಪಜಿಲ್ಲೆಗಳ ಎರಡು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟ: ಚೆರುವತ್ತೂರ್ ಉಪಜಿಲ್ಲೆಗೆ ಸಮಗ್ರ ಪ್ರಶಸ್ತಿ
0
ನವೆಂಬರ್ 19, 2022
Tags