ಕುಂಬಳೆ: ಉಳುವಾರಿನ ಮಸೀದಿಯಲ್ಲಿ ಮೂರು ದಿನಗಳ ಕಾಲ ನಡೆದ ಬುರ್ದಾ ಮಜ್ಲಿಸ್ ತಾಜುಲ್ ಉಲಮಾ ನೂರುಲ್ ಉಲಮಾ ಹಾಗೂ ಪ್ರವಚನ ಕಾರ್ಯಕ್ರಮ ಸೋಮವಾರ ಸಮಾರೋಪಗೊಂಡಿತು. ನಾಡಿನ ವಿವಿಧೆಡೆಯಿಂದ ಮುಸ್ಲಿಂ ಮತಪಂಡಿತರು ಆಗಮಿಸಿದ್ದರು.
ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರಾ ನೇತೃತದಲ್ಲಿ ಪ್ರಾರ್ಥನಾ ಸಭೆ ನಡೆಯಿತು. ಬಳಿಕ ಅವರು ಸಮಾರೋಪ ಸಭೆಗೆ ಚಾಲನೆ ನೀಡಿದರು. ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಜ.ಕಾರ್ಯದರ್ಶಿ ಪಾಲಂಕೋಡ್ ಅಬ್ದುಲ್ ಕದೀರ ಮದನಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಸುಲೈಮಾನ್ ಕರಿವೆಳ್ಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರೀಂ ಮಾಸ್ತರ್ ದರ್ಬಾರ್ ಕಟ್ಟೆ ಉಪನ್ಯಾಸ ನೀಡಿದರು. ಮೂಸಾ ಸಖಾಫಿ ಕಳತ್ತೂರು, ಜಮಾಲ್ ಸಖಾಫಿ ಪೆರ್ವಾಡ್, ಉಮರ್ ಸಖಾಫಿ ಕರ್ನೂರು, ಅಶ್ರಫ್ ಸಅದಿ ಆರಿಕ್ಕಾಡಿ, ಅಬ್ದುಸ್ಸಲಾಂ ಸಖಾಫಿ ಬುರ್ದಾ ಮಜ್ಲಿಸ್, ಸಯ್ಯದ್ ಮುಲ್ಲಕೋಯ ಕುಂಞÂ್ಞ ತಂಙಳ್, ರಹೂಫ್ ಅಝ್ಹರಿ ಅಕೋಡ್, ಶಮ್ನಾದ್ ಚಲಿಯಂ ಮತ್ತು ಹಿಶಾಮ್ ಕೂತುಪರಂಬ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಉಳುವಾರ್ ತಾಜುಲ್ ಉಲಮಾ ನೂರುಲ್ ಉಲಮಾ ಮತ್ತು ಧಾರ್ಮಿಕ ಸಭೆ ಸಮಾರೋಪ
0
ನವೆಂಬರ್ 23, 2022
Tags