ಕಾಸರಗೋಡು: ಪ್ರೆಸ್ ಕ್ಲಬ್ ಕಾಸರಗೋಡು ವತಿಯಿಂದ ನಡೆದ ವಿಶ್ವಕಪ್ ಫುಟ್ ಬಾಲ್‍ನ ಭವಿಷ್ಯವಾಣಿ ಸ್ಪರ್ಧೆಯನ್ನು ಕಾರ್ಮಿಕ ಮತ್ತು ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಸ್ವಾಗತಿಸಿದರು. ನಹಾಸ್ ಪಿ ಮುಹಮ್ಮದ್, ಶೈಜು ಕೆ.ಕೆ, ಪ್ರದೀಪ್ ನಾರಾಯಣನ್, ಪುರುಷೋತ್ತಮ್ ಪೆರ್ಲ, ಮತ್ತು ಮೆಲ್ಬಿನ್ ಜೋಸೆಫ್ ಉಪಸ್ಥಿತರಿದ್ದರು.
ವಿಶ್ವ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಬಹುದಾದ ತಂಡ, ಫೈನಲ್‍ಗೆ ತಲುಪಬಹುದಾದ ತಂಡಗಳು, ಫೈನಲ್ ಪಂದ್ಯಾಟದಲ್ಲಿ ಗೋಲು ಸ್ಥಿತಿ ಯಾವ ರೀತಿ ಇರಬಹುದು ಎಂಬ ಪ್ರಶ್ನಾವಳಿಗಳನ್ನೊಳಗೊಂಡ ಚೀಟಿಯನ್ನು ಭರ್ತಿಗೊಳಿಸಿ ಪೆಟ್ಟಿಗೆಗೆ ಹಾಕುವ ಮೂಲಕ ಸಚಿವ ವಿ.ಶಿವನ್ ಕುಟ್ಟಿ ಸ್ಪರ್ಧೆಗೆ ಚಾಲನೆ ನೀಡಿದರು.
8ರಂದು ಶೂಟೌಟ್ ಸ್ಪರ್ಧೆ:
ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಪತ್ರಕರ್ತರಿಗಾಗಿ ಶೂಟೌಟ್ ಸ್ಪರ್ಧೆ ಡಿ. 8ರಂದು ಪ್ರೆಸ್‍ಕ್ಲಬ್ ವಠಾರದಲ್ಲಿ ಜರುಗಲಿದೆ. ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಸ್ಪರ್ಧೆಗೆ ಚಾಲನೆ ನೀಡುವರು.
ಕಾಸರಗೋಡು ಪ್ರೆಸ್‍ಕ್ಲಬ್‍ನಿಂದ ಫುಟ್‍ಬಾಲ್ ಭವಿಷ್ಯವಾಣಿ ಸ್ಪರ್ಧೆ: ಸಚಿವರಿಂದ ಚಾಲನೆ
0
ನವೆಂಬರ್ 30, 2022
Tags