ನವದೆಹಲಿ:ಚುನಾವಣಾ ಬಾಂಡ್‌ಗಳ Electoral Bonds ಯೋಜನೆಗೆ ಕೇಂದ್ರ ಸರಕಾರ ಸೋಮವಾರ ತಿದ್ದುಪಡಿ ತಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುವ ವರ್ಷಗಳಲ್ಲಿ 15 ಹೆಚ್ಚುವರಿ ದಿನಗಳ ಕಾಲ ಈ ಬಾಂಡ್‌ಗಳನ್ನು ಮಾರಾಟ ಮಾಡಲು ಪ್ರಸಕ್ತ ತಿದ್ದುಪಡಿಯು ಅವಕಾಶ ಮಾಡಿಕೊಡುತ್ತದೆ.
ತಿದ್ದುಪಡಿ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಈ ತಿದ್ದುಪಡಿಯನ್ನು ಬಳಸಿಕೊಂಡ ಸರಕಾರವು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಿಗೆ ಮುಂಚಿತವಾಗಿ ನವೆಂಬರ್ 9ರಿಂದ 15ರವರೆಗೆ ಹೊಸದಾಗಿ ಚುನಾವಾಣಾ ಬಾಂಡ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಚುನಾವಣಾ ಬಾಂಡ್‌ಗಳು ಹಣದ ಮೌಲ್ಯವನ್ನು ಹೊಂದಿದ್ದು, ನಾಗರಿಕರು ಅಥವಾ ಕಾರ್ಪೊರೇಟ್ ಕಂಪೆನಿಗಳು ಅವುಗಳನ್ನು ಬ್ಯಾಂಕೊಂದರಿಂದ ಖರೀದಿಸಿ ರಾಜಕೀಯ ಪಕ್ಷವೊಂದಕ್ಕೆ ದೇಣಿಗೆಯ ರೂಪದಲ್ಲಿ ನೀಡಬಹುದಾಗಿದೆ. ಬಳಿಕ ರಾಜಕೀಯ ಪಕ್ಷಗಳು ಆ ಬಾಂಡ್‌ಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಿ ಅವುಗಳನ್ನು ಹಣವಾಗಿ ಮಾರ್ಪಡಿಸಿಕೊಳ್ಳಬಹುದಾಗಿದೆ. ಕೇಂದ್ರ ಸರಕಾರವು ಮೊದಲ ಬಾರಿಗೆ ಚುನಾವಣಾ ಬಾಂಡ್‌ಗಳನ್ನು 2018 ಜನವರಿಯಲ್ಲಿ ಜಾರಿಗೆ ತಂದಿತ್ತು.
ಬಾಂಡ್‌ಗಳು ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ತಲಾ 10 ದಿನಗಳ ಕಾಲ ಖರೀದಿಗೆ ಲಭ್ಯವಿರುತ್ತವೆ. ಲೋಕಸಭಾ ಚುನಾವಣೆಗಳು Assembly Election ನಡೆಯುವ ವರ್ಷಗಳಲ್ಲಿ ಹೆಚ್ಚುವರಿ 30 ದಿನಗಳ ಕಾಲ ಬಾಂಡ್‌ಗಳ ಮಾರಾಟಕ್ಕೆ ಅವಕಾಶವಿದೆ.
75% ದೇಣಿಗೆ ಬಿಜೆಪಿಗೆ!
2020-21ರ ಆರ್ಥಿಕ ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ದೇಣಿಗೆಗಳ ಪೈಕಿ ಸುಮಾರು 75 ಶೇಕಡದಷ್ಟನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮುಖ್ಯಾಂಶಗಳು
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುವ ವರ್ಷಗಳಲ್ಲಿ 15 ಹೆಚ್ಚುವರಿ ದಿನಗಳ ಕಾಲ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಪ್ರಸಕ್ತ ತಿದ್ದುಪಡಿಯಿಂದ ಅವಕಾಶ.
ಈ ತಿದ್ದುಪಡಿಯನ್ನು ಬಳಸಿಕೊಂಡು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಿಗೆ ಮುಂಚಿತವಾಗಿ ನವೆಂಬರ್ 9ರಿಂದ 15ರವರೆಗೆ ಹೊಸದಾಗಿ ಚುನಾವಾಣಾ ಬಾಂಡ್‌ಗಳ ಮಾರಾಟ.