ಕಾಸರಗೋಡು: ಕನಕದಾಸರ ಕೀರ್ತನೆಗಳಿಗೆ ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವುದಾಗಿ ಹಿರಿಯ ದಾಸ ಸಂಕೀರ್ತನಕಾರ, ಕನಕಪ್ರಶಸ್ತಿ ¥ಪುರಸ್ಕøತ ಜಯಾನಂದ ಕುಮಾರ್ ಹೊಸದುರ್ಗ ತಿಳಿಸಿದ್ದಾರೆ.
ಅವರು ಕೋಟೆಕಣಿ ರಾಮನಗರ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಆಯೋಜಿಸಲಾದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷೆತವ ಹಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ವಿ.ಬಿ ಕುಳಮರ್ವ ಸಮಾರಂಭ ಉದ್ಘಾಟಿಸಿದರು. ಕೀರ್ತನಕಾರರಾದ ಪುಳ್ಕೂರು ಮೋಹನ ಆಚಾರ್ಯ ಮತ್ತು ಕಾವ್ಯಾಕುಶಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಂಚಾಳಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಶ್ವಿನಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಡ್ಲು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಉಳಿಯತ್ತಡ್ಕದ ಶ್ರೀ ಶಕ್ತಿ ಬಾಲವೃಂದ ಮತ್ತು ಪುಳ್ಕೂರು ಮಹಾದೇವ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ನಡೆಯಿತು.
ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಕನಕದಾಸ ಜಯಂತಿ
0
ನವೆಂಬರ್ 14, 2022
Tags