ಪೆರ್ಲ: ಅಗಲ್ಪಾಡಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಅನ್ವಿತಾ ಶೇಣಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ನಾಟ್ಯ ಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿμÉ್ಯಯಾದ ಈಕೆ ಸಂಸ್ಕøತ ಕಂಠಪಾಠ, ಜಾನಪದ ನೃತ್ಯ, ಸಂಘ ನೃತ್ಯದಲ್ಲಿ ಎ ಗ್ರೇಡ್ ಪಡೆದ ಬಾಲ ಪ್ರತಿಭೆಯಾಗಿದ್ದಾಳೆ. ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾದ ಈಕೆ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಶಿಕ್ಷಕಿ ಶಶಿರೇಖಾ ದಂಪತಿಗಳ ಪುತ್ರಿ.
ಅನ್ವಿತಾ ಶೇಣಿ ಯುಪಿ ವಿಭಾಗ ಭರತನಾಟ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ನವೆಂಬರ್ 28, 2022