ಕುಂಬಳೆ: ಕಾವ್ಯ, ಸಾಹಿತ್ಯಗಳು ಜೀವನ ಯೋಗವನ್ನು ಹೇಗೆ ಕಲಿಸಿಕೊಡಬೇಕೋ ಹಾಗೇ ತೋರುಗಂಬವೂ ಆಗಬೇಕು. ಅತ್ಯಂತ ದೊಡ್ಡ ಸಂಪತ್ತು ಸಂಸ್ಕøತಿ. ಸಂಸ್ಕøತಿ ನಾಶವೆಂದರೆ ಸರ್ವಸ್ವವೂ ನಾಶವಾದಂತೆ. ಕಾವ್ಯ ವಾಚ್ಯವಾಗದೇ ಸೂಚ್ಯವಾಗಬೇಕು. ಶ್ರೀಕೃಷ್ಣಯ್ಯ ಅವರ ಕವಿತೆಗಳು ಸೂಚ್ಯವಾಗಿಯೇ ಇದೆ ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಹೇಳಿದರು.
ಭಾನುವಾರ ಅನಂತಪುರದ ಅನಂತಶ್ರೀ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಶ್ರೀಕೃಷ್ಣಯ್ಯ ಅನಂತಪುರ ಅವರ ‘ಬೇರುಗಳು ಅಮ್ಮನ ಹಾಗೆ’ ಮತ್ತು ಹನಿಗವನ ‘ಎದೆ ಬಿಗಿದ ಕ್ಷಣಗಳು’ ಎಂಬೆರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖ್ಯಾತ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಬೇರುಗಳು ಅಮ್ಮನ ಹಾಗೆ ಕವನ ಸಂಕಲನದ ಬಗ್ಗೆ ಮಾತನಾಡಿ, ಸಾಹಿತ್ಯದ ಎಲ್ಲ ಪಂಥಗಳನ್ನು ಕಂಡ ಈ ಕವಿ ಯಾವುದೇ ಪಂಥವನ್ನು ಸ್ವೀಕರಿಸಿ ಬರೆದವರಲ್ಲ. ತಮ್ಮದೇ ರೀತಿಯಲ್ಲಿ ಬರೆಯುತ್ತಾ ಬಂದವರು ಎಂದರು.
ಎದೆ ಬಿಗಿದ ಕ್ಷಣಗಳು ಹನಿಗವನ ಸಂಕಲನದ ಬಗ್ಗೆ ಸಾಹಿತಿ, ಸಹ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಅವರು ಮಾತನಾಡಿದರು. ಪ್ರದೀಪ್ ಬೇಕಲ್ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಪಿ.ಎಸ್.ಪುಣಿಂಚತ್ತಾಯ, ಶಿವಾನಂದ ಬಳಕ್ಕಿಲ ಮತ್ತು ಚಂದ್ರಶೇಖರ ಅನಂತಪುರ ಅವರನ್ನು ಸಮ್ಮಾನಿಸಲಾಯಿತು. ಪಿ.ಎಸ್.ಪುಣಿಂಚತ್ತಾಯ ಅವರು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೇಖಕರ ಸಂಘ ಮತ್ತು ಪ್ರಕೃತಿ ಯುವ ತಂಡದಿಂದ ಶ್ರೀಕೃಷ್ಣಯ್ಯ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮೃತಾ ಭಟ್ ಪೆರಿಯ ಪ್ರಾರ್ಥನೆ ಹಾಡಿದರು. ಸಂತೋಷ್ ಅನಂತಪುರ ಸ್ವಾಗತಿಸಿ, ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ವಿಜಯ ಕುಮಾರ ಅನಂತಪುರ ವಂದಿಸಿದರು.
ಕಾವ್ಯ ತೋರುಗಂಬವಾಗಬೇಕು: ಡಾ.ರಮಾನಂದ ಬನಾರಿ: ಶ್ರೀಕೃಷ್ಣಯ್ಯ ಅನಂತಪುರರ ಕೃತಿಗಳ ಬಿಡುಗಡೆ
0
ನವೆಂಬರ್ 07, 2022