ಕಾಸರಗೋಡು: ಪಠ್ಯಕ್ರಮ ಸುಧಾರಣೆಯ ಕುರಿತು ಜಿಲ್ಲಾ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ವಯಸ್ಕರ ಕಲಿಕೆ ಮತ್ತು ಮುಂದಿನ ವಿಧ್ಯಾಭ್ಯಾಸ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನ. 18 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್ ಎನ್ ಸರಿತಾ ಸಮಾರಂಭ ಉದ್ಘಾಟಿಸುವರು. ಎಸ್ ಸಿ ಇ ಆರ್ ಟಿ, ಕಿಲಾ, ಡಯಟ್, ಪಿ ಆರ್ ಡಿ, ಸಮತ್ವ ಶಿಕ್ಷಣ, ಸಮತ್ವ ಶಿಕ್ಷಣ ಪಡೆದು ಉತ್ತೀರ್ಣರಾದವರು, ತೃತೀಯ ಲಿಂಗಿ ವಿದ್ಯಾರ್ಥಿಗಳು ಹಾಗೂ ಸಾಕ್ಷರತಾ ಪ್ರೇರಕ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
ಇಂದು 'ವಯಸ್ಕರ ಶಿಕ್ಷಣ ಹಾಗೂ ಮುಂದಿನ ವಿಧ್ಯಾಭ್ಯಾಸ' ವಿಚಾರ ಸಂಕಿರಣ
0
ನವೆಂಬರ್ 17, 2022