ಸಮರಸ ಚಿತ್ರಸುದ್ದಿ: ಉಪ್ಪಳ: ಕೊಟ್ಟಾಯಂ ನಲ್ಲಿ ಜರುಗಿದ ರಾಜ್ಯಮಟ್ಟದ ಟೇಕ್ವೆಂಡೋ ಚಾಂಪಿಯನ್ ಶಿಪ್ ನಲ್ಲಿ ಸಬ್ ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಪೈವಳಿಕೆ ಕಾಯರ್ಕಟ್ಟೆಯ ಸರ್ಕಾರಿ ಉನ್ನತ ಪ್ರೌಢಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕೌಸಲ್ಯ ಬೆಳ್ಳಿ ಪದಕವನ್ನು ಗೆದ್ದಿದ್ದಾಳೆ. ಇವರು ಪೈವಳಿಕೆಯ ನಾರಾಯಣ ನಾಯ್ಕ ಹಾಗು ಸುಮಿತ್ರ ದಂಪತಿಗಳ ಪುತ್ರ್ರಿ. ಶಾಲೆಯ ಶಿಕ್ಷಕ, ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದೆ.
ರಾಜ್ಯಮಟ್ಟದಲ್ಲಿ ಬೆಳ್ಳಿಪದಕ
0
ನವೆಂಬರ್ 09, 2022