ಪತ್ತನಂತಿಟ್ಟ: ಶಬರಿಮಲೆ ಸಾಂಪ್ರದಾಯಿಕ ಕಾಲ್ನಡಿಗೆ ಮಾರ್ಗದಲ್ಲಿ ಕಲ್ಲು ಹಾಸು ಹಾಕಲಾಗಿದೆ. ಇನ್ನು ಭಕ್ತರು ಕಲ್ಲು, ಮುಳ್ಳುಗಳ ಮೇಲೆ ಕಾಲಿಡದೆ ಅಯ್ಯಪ್ಪನ ದರ್ಶನಕ್ಕೆ ಪ್ರಯಾಣಿಸಬಹುದು. ಕೇಂದ್ರದ 12 ಕೋಟಿ ರೂ.ಗಳ ಯೋಜನಾಮೊತ್ತ ಬಳಸಲಾಗಿದೆ.
ಕೇಂದ್ರ ಸರ್ಕಾರದ ಯಾತ್ರಿ ಪ್ರವಾಸೋದ್ಯಮ ಯೋಜನೆಯಡಿ ಕಲ್ಲುಗಳನ್ನು ಹಾಕಲಾಗಿದೆ. ಈ ಕಲ್ಲುಗಳನ್ನು ಕರ್ನಾಟಕದ ಸಾದರಹಳ್ಳಿ ಮತ್ತು ಹೊಸೂರಿನಿಂದ ತರಲಾಗಿದೆ. ರಸ್ತೆಗೆ ಅಂತಿಮ ಸ್ಪರ್ಶ ನಡೆಯುತ್ತಿದೆ. ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಅವರು ಇದೇ 17ರಂದು ಪರಿಷ್ಕøತ ಪಥ ಉದ್ಘಾಟಿಸುವರು.
ಸಾಂಪ್ರದಾಯಿಕ ಮಾರ್ಗದಲ್ಲಿದ್ದ ಕಡಿದಾದ ಏರು ಮತ್ತು ದೊಡ್ಡ ಮೆಟ್ಟಿಲುಗಳನ್ನು ನಿವಾರಿಸುತ್ತದೆ. ನೀಲಿಮಲ ಮತ್ತು ಅಪಾಚಿ ಮೇಡು ಹತ್ತುವ ಕಷ್ಟಗಳೂ ಕಡಿಮೆಯಾಗುತ್ತವೆ. ರಸ್ತೆಯ ಮೇಲೆ ಕೈಗಂಬಿಗಳು ಮತ್ತು ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‍ಗಳನ್ನು ಹತ್ತಲು ಸೌಲಭ್ಯಗಳಿವೆ. ಪಂಪಾದಿಂದ ಶರಂಕುತ್ತಿವರೆಗೆ ರಸ್ತೆ 2,750 ಮೀಟರ್ ಉದ್ದ ಮತ್ತು ಏಳು ಮೀಟರ್ ಅಗಲವಿದೆ.
ಅಯ್ಯಪ್ಪ ದರ್ಶನ ಇನ್ನಷ್ಟು ಸುಲಲಿತ: ಶಬರಿಮಲೆ ಸಾಂಪ್ರದಾಯಿಕ ಮಾರ್ಗದಲ್ಲಿ ಕಲ್ಲುಹಾಸು
0
ನವೆಂಬರ್ 15, 2022