ಕಾಸರಗೋಡು: ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವಕ್ಕೆ ವಾಹನಗಳ ನಿಲುಗಡೆಗಾಗಿ ಮೈದಾನ ನಿರ್ಮಾಣದ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಯಿತು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಕಾಮಗಾರಿ ಉದ್ಘಾಟಿಸಿದರು. ಪಳ್ಳಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಂಚಾರ ನಿಯಂತ್ರಣ ಸಮಿತಿ ಅಧ್ಯಕ್ಷ ಮವ್ವಾಲ್ ಕುಞಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಸಮುದ್ರ ಕರಾವಳಿಯಿಂದ 300 ಮೀಟರ್ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಒದಗಿಸಲಾಗಿದೆ. 12 ಕೇಂದ್ರಗಳಲ್ಲಿ 20 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಪಳ್ಳಿಕ್ಕರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ವಿ. ರವಿವರ್ಮ, ಕಾರ್ಯದರ್ಶಿ ಕೆ. ಪುಷ್ಕರಾಕ್ಷನ್, ಬಿಆರ್‍ಡಿಸಿ ಸಹಾಯಕ ವ್ಯವಸ್ಥಾಪಕ ಪಿ.ಸುನೀಲ್ ಕುಮಾರ್, ಕೆಸಿಕೆ ಶೀಬಾ, ಬಕ್ಕರ್ ಸಾಹಿಬ್, ಸಿರಾಜುದ್ದೀನ್ ಸಾಹೇಬ್ ಉಪಸ್ಥಿತರಿದ್ದರು. ಸಂಚಾರ ನಿಯಂತ್ರಣ ಸಮಿತಿಯ ಸಂಚಾಲಕ ಟಿ.ಸುಧಾಕರನ್ ಸ್ವಾಗತಿಸಿದರು. ಪಿ.ಕೆ.ಮುಹಮ್ಮದ್ ಸಲೀಂ ವಂದಿಸಿದರು.
ಬೇಕಲ್ ಬೀಚ್ ಉತ್ಸವ: ವಾಹನ ನಿಲುಗಡೆಗಾಗಿ ಮೈದಾನ ನಿರ್ಮಾಣಕ್ಕೆ ಚಾಲನೆ
0
ನವೆಂಬರ್ 06, 2022
Tags