ಕುಂಬಳೆ: ಕುಂಬಳೆ ಜನಮೈತ್ರಿ ಪೋಲೀಸ್ ಹಾಗೂ ಸಾಮಾಜಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹೋಟೆಲ್, ಬೇಕರಿ, ತಂಪು ಪಾನೀಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಕಾರ್ಮಿಕರಿಗೆ ವೈದ್ಯಕೀಯ ಶಿಬಿರ ನಡೆಸಲಾಯಿತು.
ಕುಂಬಳೆ ಪೋಲೀಸ್ ನಿರೀಕ್ಷಕ ಪಿ.ಪ್ರಮೋದ್ ಶಿಬಿರವನ್ನು ಉದ್ಘಾಟಿಸಿದರು. ಮಲೇರಿಯಾ, ಟೈಫಾಯಿಡ್, ಜಾಂಡೀಸ್ ಮತ್ತು ಕುಷ್ಠರೋಗ ಸೇರಿದಂತೆ 6 ರೋಗಗಳ ಲ್ಯಾಬ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ಡಾ.ದೀಪ್ತಿ ವಿಜಯಕುಮಾರ್ ಕಾರ್ಮಿಕರನ್ನು ಪರೀಕ್ಷಿಸಿದರು. ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಿ ಔಷದೋಪಚಾರ ನೀಡಲಾಯಿತು. ಪರೀಕ್ಷೆ ವೇಳೆ ಯಾವುದೇ ಕಾಯಿಲೆಗಳು ಕಂಡು ಬರದವರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ವೈದ್ಯಾಧಿಕಾರಿ ಡಾ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಎಸ್‍ಐ ಎ.ಎನ್.ಸುರೇಶ್ ಕುಮಾರ್, ಆರೋಗ್ಯ ನಿರೀಕ್ಷಕ ನಿಶಾಮೋಳ್, ಜನಮೈತ್ರಿ ಬೀಟ್ ಅಧಿಕಾರಿಗಳಾದ ಎಂ.ಗೋವಿಂದನ್, ಶ್ರೀಕುಮಾರ್, ತೃಷ್ಣ, ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್, ಅಖಿಲ್ ಕರೈ, ಕಿರಿಯ ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಎಸ್.ಶಾರದ ಮಾತನಾಡಿದರು. ಕುಂಬಳೆ, ಮಂಗಲ್ಪಾಡಿ, ಪುತ್ತಿಗೆ ಮುಂತಾದ ಪಂಚಾಯತಿ ವ್ಯಾಪ್ತಿಯ ಅತಿಥಿ ಕಾರ್ಮಿಕರು, ಹೋಟೆಲ್ ಮಾಲೀಕರು ಸೇರಿದಂತೆ ಸುಮಾರು 150 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು.
ಜನಮೈತ್ರಿ ಪೋಲೀಸರಿಂದ ಅತಿಥಿ ನೌಕರರಿಗೆ ವೈದ್ಯಕೀಯ ಶಿಬಿರ
0
ನವೆಂಬರ್ 09, 2022
Tags