ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಮೆರವಣಿಗೆ ಸೋಮವಾರ ಬೆಳಿಗ್ಗೆ 10 ಕ್ಕೆ ಮೀಯಪದವಲ್ಲಿ ನಡೆಯಿತು. ವಿದ್ಯಾವರ್ಧಕ ಎಯುಪಿ ಶಾಲೆಯಿಂದ ಹೊರಟು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯಲ್ಲಿ ಮೆರಣಿಗೆ ಸಮಾಪ್ತಿಗೊಂಡಿತು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಶಾಲ ಸಂಚಾಲಕರಾದ ಶ್ರೀಧರ ರಾವ್, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮುಖ್ಯೋಪಾಧ್ಯಾಯರುಗಳಾದ ಶಿವಶಂಕರ ಭಟ್, ಅರವಿಂದಾಕ್ಷ ಭಂಡಾರಿ ಮತ್ತಿತ್ತರ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಾಳೆಯಿಂದ (ನ.22) 25 ರವರೆಗೆ 15 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿರುವುದು. ಉಪಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳ ನಾಲ್ಕು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು, ಸಾರ್ವಜನಿಕರು ಭಾಗವಹಿಸುವರು.
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನಾಳೆಯಿಂದ: ಗಮನ ಸೆಳೆದ ಡಂಗುರ ಮೆರವಣಿಗೆ
0
ನವೆಂಬರ್ 21, 2022
Tags