ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ 32 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 67 ನೇ ಕನ್ನಡ ರಾಜ್ಯೋತ್ಸವ - ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆಯ ಕಾರ್ಯಕ್ರಮ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆಯಿತು.
ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ ಪಿ.ರಮೇಶ್ ಮುಖ್ಯ ಅತಿಥಿಯಾಗಿದ್ದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ವಂದಿಸಿದರು. ಗುರುಪ್ರಸಾದ್ ಕೋಟೆಕಣಿ, ದಿವಾಕರ ಪಿ.ಅಶೋಕನಗರ, ಜಯಾನಂದ ಕುಮಾರ್ ಹೊಸದುರ್ಗ, ಶ್ರೀಕಾಂತ್ ಕಾಸರಗೋಡು, ಕೆ.ಮುರಳೀಧರ ಪಾರೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆಯ ಕನ್ನಡ ಪ್ರತಿಜ್ಞೆಯನ್ನು ಗಡಿನಾಡ ಕಲಾವಿದರು ಸಂಸ್ಥೆಯ ಉಪಾಧ್ಯಕ್ಷ ದಿವಾಕರ ಅಶೋಕನಗರ ಬೋಧಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ
0
ನವೆಂಬರ್ 01, 2022