ಪೆರ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಆನ್ ಲೈನ್ ಮೂಲಕ ನೊಂದಾವಣಿ ನಡೆಸಲು ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಕಾಟುಕುಕ್ಕೆಯ ಪೆರ್ಲತ್ತಡ್ಕದಲ್ಲಿ "ವಿಘ್ನರಾಜ್ ಆನ್ ಲೈನ್ ಸರ್ವೀಸ್" ಎಂಬ ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ) ಜನಸೇವಾ ಕೇಂದ್ರ ಬುಧವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಸಮಾರಂಭದಲ್ಲಿ ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಎಣ್ಮಕಜೆ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ರಾಮಚಂದ್ರ, ಶಶಿಧರ ಕಾಟುಕುಕ್ಕೆ, ನಿವೃತ್ತ ಪ್ರಾಂಶುಪಾಲ ಸುನಿತ್ ಕುಮಾರ್ ಡಿ, ಬಿ.ರಾಜೇಶ್ ಶೆಟ್ಟಿ, ರಮೇಶ್ ಎಂ.ಕೆ, ತುಕಾರಾಮ ಕಾಟುಕುಕ್ಕೆ ,ವೀಣಾ ಟೀಚರ್ ಪ್ರಜ್ವಲ್,ಯೋಗಿಶ್ ಕಾಟುಕುಕ್ಕೆ, ಮೊದಲಾದವರು ಭಾಗವಹಿಸಿದ್ದರು.
ಕಾಟುಕುಕ್ಕೆಯ ಪೆರ್ಲತ್ತಡ್ಕದಲ್ಲಿ ಸಿಇಸಿ ಸೆಂಟರ್ ಕಾರ್ಯರಂಭ
0
ನವೆಂಬರ್ 10, 2022
Tags