ನವದೆಹಲಿ:
ಭಾನುವಾರ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ
ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಗಿಯಾಗಲಿದ್ದಾರೆ ಎಂದು
ವಿದೇಶಾಂಗ ಇಲಾಖೆ ಹೇಳಿದೆ.
ಕತಾರ್‌ನ ಅಧ್ಯಕ್ಷ ಶೇಖ್ ತಮೀಮ್ ಬಿನ್ ಅಲ್ ಥಾನಿ ಅವರ ಆಹ್ವಾನದ ಮೆರೆಗೆ ಧನ್ಕರ್ ಅವರು ಕತಾರ್‌ಗೆ ತೆರೆಳಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವುದಲ್ಲದೇ, ಅಲ್ಲಿರುವ ಭಾರತೀಯ ಸಮದಾಯದೊಂದಿಗೆ ಅವರು ಸಂವಾದ ನಡೆಸಲಿದ್ದಾರೆ.
'ಮಿತ್ರ
ರಾಷ್ಟ್ರ ಕತಾರ್ ಆಯೋಜಿಸುತ್ತಿರುವ ದೊಡ್ಡ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ,
ವಿಶ್ವಕಪ್ ಆಯೋಜನೆಯಲ್ಲಿ ಭಾರತೀಯರ ಪಾತ್ರ ಹಾಗೂ ಬೆಂಬಲವನ್ನು ಅನುಮೋದಿಸಲು ಅವಕಾಶ
ಸಿಕ್ಕಂತಾಗುತ್ತದೆ' ಎಂದು ವಿದೇಶಾಂಗ ಇಲಾಖೆ ಹೇಳಿದೆ.