HEALTH TIPS

ದಂತವೈದ್ಯರ ನಿಗೂಢ ಸಾವಿನ ಪ್ರಕರಣ ಎನ್.ಐ.ಎ.ಗೆ ವಹಿಸಿಕೊಡಬೇಕು: ಶರಣ್ ಪಂಪ್‍ವೆಲ್


               ಕಾಸರಗೋಡು: ದಂತ ವೈದ್ಯ, ಬದಿಯಡ್ಕದ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ರಹಸ್ಯ ಭೇದಿಸುವ ನಿಟ್ಟಿನಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ) ಗೆ ವಹಿಸಿಕೊಡುವುದು ಅನಿವಾರ್ಯ ಎಂದು ವಿ.ಹಿಂ.ಪ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಅಭಿಪ್ರಾಯಪಟ್ಟಿದ್ದಾರೆ.  
           ಬದಿಯಡ್ಕದ ದಂತವೈದ್ಯ ಕೃಷ್ಣಮೂರ್ತಿ ಎಸ್. ಅವರ ನಿಗೂಢ ಕೊಲೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ವಿಹಿಂಪ ಬದಿಯಡ್ಕ ಮಂಡಲ ಸಮಿತಿ ವತಿಯಿಂzತಿಂದು   ಬದಿಯಡ್ಕ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ  ಮುಖ್ಯ ಭಾಷಣ ಮಾಡಿದರು.   
        ಮೂಲಭೂತವಾದಿಗಳನ್ನು ದಮನಿಸಲು ಸಾಧ್ಯವಾಗದ ರಾಜ್ಯದ ಪೊಲೀಸರಿಂದ ನಿಗೂಢ ಸಾವಿನ ನಿಷ್ಪಕ್ಷಪಾತ ತನಿಖೆ ನಡೆಸುವುದೂ ಸಾಧ್ಯವಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದ್ದಲ್ಲಿ, ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಕೃತ್ಯ ನಡೆದಿರುವುದರಿಂದ ಉಭಯ ರಾಜ್ಯಗಳ ಪೊಲೀಸರು ಜಂಟಿಯಾಗಿ ತನಿಖೆ ನಡೆಸಬೇಕು. ವೈದ್ಯರ ಕೊಲೆಯಲ್ಲಿ ಮೂಲಭೂತವಾದಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಕೃಷ್ಣಮೂರ್ತಿ ಅವರದು ನೈಜ ಸಾವಲ್ಲ. ಸಾವಿನ ಬಗ್ಗೆ ಅನೇಕ ಸಂಶಯಗಳೂ ಹುಟ್ಟಿಕೊಳ್ಳುತ್ತಿದೆ. ನೇರ ಹೋರಾಟ ನಡೆಸಲಾಗದೆ, ಮೂಲಭೂತವಾದಿಗಳು ಮನೆಯ ಹೆಣ್ಮಕ್ಕಳನ್ನು ಮುಂದಿರಿಸಿ ಅವರಿಗೆ ಮಾನಸಿಕ ಹಿಂಸೆ ನೀಡುವ ಮೂಲಕ ಆತ್ಮಹತ್ಯೆಗೆ ಪ್ರೇರಣೆ ನೀಡಲಾಗಿದೆ.  ಪೇಟೆ ಹೃದಯಭಾಗದಲ್ಲಿರುವ ಬೆಲೆಬಾಳುವ ಇವರ ಜಾಗವನ್ನು ಮಾರಾಟ ಮಾಡುವಂತೆ ಕಳೆದ ಹಲವು ವರ್ಷಗಳಿಂದಲೂ ಕೆಲವರು ಬೇಡಿಕೆಯಿದ್ದರೂ, ಇದಕ್ಕೆ ಬೆಲೆಕೊಟ್ಟಿರಲಿಲ್ಲ. ಈ ಸಮಾಜಕ್ಕಾಗಿ ವೈದ್ಯ ಕೃಷ್ಣಮೂರ್ತಿ ಬಲಿದಾನ ಮಾಡಿದ್ದಾರೆ ಎಂದು ತಿಳಿಸಿದರು.



             ಬಿಜೆಪಿ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ನ್ಯಾಯವಾದಿ  ಕೆ.ಶ್ರೀಕಾಂತ್ ಮಾತನಾಡಿ, ವೈದ್ಯ ಕೃಷ್ಣಮೂರ್ತಿ ಅವರಿಂದ ಹನಿಟ್ರ್ಯಾಪ್ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಲು ಮುಸ್ಲಿಂ ಮೂಲಭೂತವಾದಿಗಳು ಸಂಚು ರೂಪಿಸಿದ್ದರು. ಹಣನೀಡಲು ಮುಂದಾಗದಿರುವುದರಿಂದ ಇವರಿಗೆ ಮಾನಸಿಕ ಹಿಂಸೆ ನೀಡಿ, ಇವರನ್ನು ಆತ್ಕಹತ್ಯೆಗೆ ಪ್ರೇರೇಪಿಸಲಾಗಿದೆ ಎಂದು ದೂರಿದರು.
          ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಮುಖಂಡರಾದ ರಮೇಶ್ ಕಾಸರಗೋಡು. ಸುಧಾಮ ಗೋಸಾಡ, ಹರೀಶ್ ನಾರಂಪಾಡಿ ಮುಂತಾದವರು ಉಪಸ್ಥಿತರಿದ್ದರು.  ಮಂಜುನಾಥ ಮಾನ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪುತ್ರಕಳ ವಂದಿಸಿದರು. ಬದಿಯಡ್ಕ ಮೇಲಿನ ಪೇಟೆಯ ಡಾ. ಕೃಷ್ಣಮೂರ್ತಿ ಅವರ ನಿವಾಸ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬದಿಯಡ್ಕ ಪೇಟೆಯ ವಿವಿಧೆಡೆ ಸಂಚರಿಸಿದ ನಂತರ ಬಸ್‍ನಿಲ್ದಾಣ ವಠಾರದಲ್ಲಿ ಸಮಾರೋಪಗೊಂಡಿತು. ಮಹಿಳೆಯರ ಸಹಿತ ನೂರಾರು ಮಂದಿ ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು.
      ಯಶಸ್ವಿ ಹರತಾಳ:
    ವೈದ್ಯರ ನಿಗೂಢ ಮರಣ ಖಂಡಿಸಿ ವಿಹಿಂಪ ಇಂದು ಬದಿಯಡ್ಕ ಪೇಟೆಯಲ್ಲಿ ಹರತಾಳಕ್ಕೆ ಕರೆನೀಡಿತ್ತು. ಈ ಹಿನ್ನೆಲೆಯಲ್ಲಿ ಬದಿಯಡ್ಕ  ಪೇಟೆ ನಿಶ್ಚಲವಾಗಿತ್ತು. ಅಂಗಡಿ-ಮುಗ್ಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ವಾಹನ ಸಂಚಾರವೂ ವಿರಳವಾಗಿತ್ತು.  



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries