ಮುಳ್ಳೇರಿಯ :
ರಾಜ್ಯೋತ್ಸವ ಆಚರಣೆಯ ಅಂಗವಾಗಿ ಅದೂರು ಸರಕಾರಿ ಪ್ರೌಢಶಾಲಾ ಕನ್ನಡ ಮಾಧ್ಯಮದ
ವಿದ್ಯಾರ್ಥಿಗಳಿಗೆ 'ಜ್ಞಾನದೀವಿಗೆ' ಎಂಬ ಎಸ್‌ಎಸ್‌ಎಲ್‌ಸಿ ಕಲಿಕಾ ಮಾರ್ಗದರ್ಶಿಯನ್ನು
ಉಚಿತವಾಗಿ ನೀಡುವ ಮೂಲಕ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ನಿವೃತ್ತ
ಮುಖ್ಯ ಶಿಕ್ಷಕ, ಸಮಾಜ ಸೇವಕ ವೀರೋಜಿ ಮಾಸ್ತರ್ ಕುಂಟಾರು ಇವರು, ಕೇರಳದ ಏಕೈಕ ಕನ್ನಡ
ಕಲಿಕಾ ಮಾರ್ಗದರ್ಶಿ ಜ್ಞಾನದೀವಿಗೆಯನ್ನು ಅದೂರು ಸರಕಾರಿ ಪ್ರೌಢ ಶಾಲಾ ಹತ್ತನೇ ತರಗತಿಯ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಜ್ಞಾನದೀವಿಗೆಯ ಗೌರವ ಸಂಪಾದಕರಾದ ನಿವೃತ್ತ ಶಿಕ್ಷಕ ಪ್ರಕಾಶ್ ಮಾಸ್ತರ್ ಕುಂಟಾರು, ಜ್ಞಾನ ದೀವಿಗೆಯ ಸಂಪಾದಕ ರಾಮಚಂದ್ರ ಬಲ್ಲಾಳ್, ಶಿಕ್ಷಕರಾದ ಸುಹಿರಿ, ರಂಜನಾ, ವಿನಿತಾ, ಸೌಮ್ಯ ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಿಂದ ಕನ್ನಡ ಶಾಲಾ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ನುರಿತ ಕನ್ನಡ ಮಾಧ್ಯಮದ ಶಿಕ್ಷಕರ ತಂಡವು 'ಜ್ಞಾನದೀವಿಗೆ' ಎಂಬ ಶಿಕ್ಷಣ ಮಾರ್ಗದರ್ಶಿಯನ್ನು ಪ್ರಕಟಿಸಿ, ಕುಂಬಳೆ, ಕಾಸರಗೋಡು, ಮಂಜೇಶ್ವರ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕನ್ನಡ ಭಾಷಾ ಉಳಿವಿಗಾಗಿ ವಿಶೇಷ ಮುತುವರ್ಜಿ ವಹಿಸಲಾಗುತ್ತಿದ್ದಾರೆ.
ಶಾಲಾ ಮುಖ್ಯಶಿಕ್ಷಕಿ ಸರಸ್ವತೀ ಟೀಚರ್ ಸ್ವಾಗತಿಸಿ, ವಿದ್ಯಾರ್ಥಿನಿ ಮರಿಯಮ್ಮತ್ತ್ ಸಾಬಿರಾ ವಂದಿಸಿದರು.