ಕಾಸರಗೋಡು: 2025ರ ವೇಳೆಗೆ ಉತ್ತರ ಕೇರಳದಲ್ಲಿ ಮೂಲಸೌಕರ್ಯ ಪ್ರಗತಿ ಸಾಧ್ಯವಾಗಲಿದ್ದು, ಇದು ಪ್ರಮುಖವಾಗಿ ಪ್ರವಾಸಿಗಳ ಆಕರ್ಷಣೀಯ ಕೇಂದ್ರವಾಗಲು ನೆರವಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಎ.ಎನ್. ಶಂಸೀರ್ ತಿಳಿಸಿದ್ದಾರೆ.
ಅವರು ಬೇಕಲ ಕಡಲತೀರದಲ್ಲಿ ಹತ್ತು ದಿವಸಗಳ ಕಾಲ ನಡೆಯಲಿರುವ ಬೇಕಲ್ ಫೆಸ್ಟ್‍ಗಾಗಿ ನಿರ್ಮಾಣ ಚಟುವಟಿಕೆಗಳ ಚಪ್ಪರ ಮುಹೂರ್ತ ನೆರವೇರಿಸಿ ಮತನಾಡಿದರು. ಬೇಕಲ ಸೇರಿದಂತೆ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳೂ ಸಹಕಾರಿಯಾಗಲಿದೆ.
ಪ್ರವಾಸೋದ್ಯಮ ಕೇಂದ್ರಗಳನ್ನು ಮಾಲಿನ್ಯಮುಕ್ತಗೊಳಿಸುವುದರ ಜತೆಗೆ ಮೂಲಸೌಕರ್ಯ ಅಭಿವ್ರದ್ಧಿಗೆ ಮತ್ತಷ್ಟು ಆದ್ಯತೆ ನೀಡಬೇಕಾಗಿದೆ. ಹತ್ತು ದಇವಸಗಳ ಕಾಳ ನಡೆಯಲಿರುವ ಬೇಕಲ್‍ಫೆಸ್ಟ್ ಬೇಕಲ ಕೋಟೆಯ ಮಹತ್ತರ ಅಭಿವೃದ್ಧೀಗೆ ನಾಂದಿಯಾಗಲಿ ಎಂದು ಹಾರೈಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂದನ್ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಜಿಲ್ಲಾಧಿಕಾರಿ ಡಾ. ಮಿಥುನ್ ಪ್ರೇಮರಾಜ್, ಪಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಕುಮಾರನ್ ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ ಲಕ್ಷ್ಮಿ ಸಂಘಟನಾ ಸಮಿತಿ ಪದಾಧಿಕಾರಿಗಳಾದ ಮಧು ಮುದಿಯಕ್ಕಲ್, ಹಾಕಿಂ ಕುನ್ನಿಲ್, ಕೆ.ಇ.ಎ ಬಕರ್, ಸಾದಿಕ್, ಪ್ರಶಾಂತ್ ಉಪಸ್ಥೀತರಿದ್ದರು. ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪಿ ಸ್ವಾಗತಿಸಿದರು. ರವಿವರ್ಮ ವಂದಿಸಿದರು. ಸುಭಾಷ್ ಆರುಕರ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಉತ್ತರಕೇರಳದ ಪ್ರಮುಖ ಆಕರ್ಷಣೀಯ ಕೇಂದ್ರವಾಗಲಿರುವ ಬೇಕಲ ಕೋಟೆ: ಸ್ಪೀಕರ್
0
ನವೆಂಬರ್ 11, 2022
Tags