ಕಾಸರಗೋಡು: ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿ ಕಾಞಂಗಾಡು ನಿವಾಸಿಯೊಬ್ಬನನ್ನು ಏಳನೇ ಬಾರಿಗೆ ಪೊಲೀಸರು ಬಂಧಿಸಿದ್ದಾರೆ!
ಕಾಞಂಗಾಡ್ ಕೋಟಚೇರಿ ಸರ್ಕಲ್ ಬಳಿ ಸ್ಟೇಷನರಿ ಅಂಗಡಿ ನಡೆಸುತ್ತಿರುವ ಟಿ.ಬಿ.ರಸ್ತೆಯ ಅಬ್ದುಲ್ ಅಜೀಜ್ (60)ಬಂಧಿತ ಆರೋಪಿ. ಹೊಸದುರ್ಗ ಎಸ್.ಐ. ಶರತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಡಸಲಾಗಿದ್ದು, ಈತನಿಂದ 30 ಪಾನ್‍ಮಸಾಲ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ಅಂಗಡಿಯ ಹೊರಗಡೆ ಅಮಲು ಪದಾರ್ಥಗಳ ಪ್ಯಾಕೆಟ್ ದಾಸ್ತಾನಿರಿಸಿ ಈತ ನಿರಂತರವಾಗಿ ಮಾರಾಟ ಮಾಂಡುತ್ತಿದ್ದಾನೆ. ಮಾದಕ ವಸ್ತುಗಳ ಮಾರಾಟ ಮಧ್ಯೆ ಬಂಧಿತನಾಗುವ ಈತ ನಂತರ ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ದಂಧೆ ಮುಮದುವರಿಸುತ್ತಿದ್ದಾನೆ. ಈ ರೀತಿ ಸತತ ಏಳನೇ ಬಾರಿ ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮಾದಕ ದ್ರವ್ಯ ಮಾರಾಟ ಸತತ ಏಳನೇ ಬಾರಿಗೆ ಬಂಧನ
0
ನವೆಂಬರ್ 06, 2022