ಕುಂಬಳೆ : ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಪಶ್ಚಿಮಜಾಗರ ಪೂಜೆ, ಕಾಕಡಾರತಿ, ಭಕ್ತದಿಗಳಿಂದ ಸಹಸ್ರಾವ್ರರ್ತಿ ಪ್ರದಕ್ಷಿಣೆ (ಹರಿನಾಮ ಘೋಷ ಸಹಿತ) ನಡೆಯಿತು. ಜೊತೆಗೆ ವೇದಮೂರ್ತಿ ಕೆ ಪುಂಡಲೀಕ ಭಟ್ ಅವರು ಪ್ರಾರ್ಥನೆ ಮಾಡಿ ದೀಪ ಪ್ರತಿಷ್ಠೆಗೈದು ಅಖಂಡ ಏಕಾಹ ಭಜನೆಗೆ ಚಾಲನೆ ನೀಡಿದರು. ಬಳಿಕ ಏಕಹಾ ಭಜನೆಯ ಪ್ರಾತಕಾಲ ಪೂಜೆ, ಶ್ರೀ ದೇವರಿಗೆ ಉದ್ವರ್ತನೆ, ಶುದ್ದಿಕಲಶ, ಸಂಜೆ ಮಹಾಪೂಜೆ, ಶ್ರೀ ವಿಶ್ವರೂಪ ದರ್ಶನ, ಸಹಸ್ರ ದೀಪಾರಾಧನೆ, ರಾತ್ರಿ ಧಾತ್ರಿಕಟ್ಟೆಯಿಂದ ಹುಲ್ಪೆ ಮೆರವಣಿಕೆ ಹಾಗೂ ರಾತ್ರಿ ಪೂಜೆ ನಡೆಯಿತು. ಶನಿವಾರ ಬೆಳಗ್ಗೆ ಪಶ್ಚಿಮ ಜಾಗರ ಪೂಜೆ ಹಾಗೂ ದೀಪ ವಿಸರ್ಜನೆ, ಏಕಹಾ ಭಜನಾ ಮಂಗಳ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದವು.
ವೀರವಿಠಲ ದೇವಳದಲ್ಲಿ ಕಾತೀಕ ಏಕಾದಶಿ ಆಚರಣೆ
0
ನವೆಂಬರ್ 05, 2022