ಕಾಸರಗೋಡು: ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ವಿಜ್ಞಾನಮೇಳ-ವೃತ್ತಿ ಪರಿಚಯ ಮೇಳದಲ್ಲಿ ಕಾಸರಗೋಡು ಉಪಜಿಲ್ಲೆ 1276ಅಂಕಗಳೊಂದಿಗೆ ಸಮಗ್ರ ಚಾಂಪ್ಯನ್‍ಶಿಪ್ ಪಡೆದುಕೊಂಡಿದೆ.
ಹೊಸದುರ್ಗ ಉಪಜಿಲ್ಲೆ 1241ಅಂಕಗಳೊಂದಿಗೆ ದ್ವಿತೀಯ ಹಾಗೂ 1180ಅಂಕಗಳೊಂದಿಗೆ ಚೆರ್ವತ್ತೂರು ಉಪಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಕುಂಬಳೆ ಉಪಜಿಲ್ಲೆ1017, ಚಿತ್ತಾರಿಕಲ್ 835, ಮಂಜೇಶ್ವರ 753 ಅಂಕಗಳೊಂದಿಗೆ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ವೃತ್ತಿಪರಿಚಯ ಹೊರತುಪಡಿಸಿ, ಉಳಿದ ಮೇಳಗಳಲ್ಲಿ ಕಾಸರಗೋಡು ಉಪಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸಮಾರೋಪ ಸಮಾರಂಭವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು.