ತಿರುವನಂತಪುರ: ಶರೋನ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಕಾನೂನು ಸಲಹೆ ಕೇಳಿದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರಾದಲ್ಲಿ ಗ್ರೀಷ್ಮಾಳ ಮನೆ ಇದೆ. ಈ ಮನೆಯಲ್ಲಿಯೇ ಸಂಚು ಮತ್ತು ಹತ್ಯೆ ಯತ್ನ ನಡೆದಿದೆ. ಆರೋಪಿಗಳ ಹೇಳಿಕೆ ಪ್ರಕಾರ, ಶರೋನ್ ಅವರನ್ನು ಗ್ರೀಷ್ಮಾಳ ಮನೆಗೆ ಆಹ್ವಾನಿಸಿ ಔಷಧಿಗೆ ಕೀಟನಾಶಕ ಬೆರೆಸಿ ಕುಡಿಸಲಾಗಿತ್ತು. ಈ ಪ್ರದೇಶವು ತಮಿಳುನಾಡಿನ ಪಲುಕಲ್ ಪೋಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಕಾನೂನು ಸಲಹೆ ಪಡೆಯಲು ಪೋಲೀಸರು ಮುಂದಾದರು.
ಇದೇ ವೇಳೆ ಪಾರಶಾಲ ಪೋಲೀಸರು ಶರೋನ್ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಅದನ್ನು ಜಿಲ್ಲಾ ಅಪರಾಧ ದಳಕ್ಕೆ ವರ್ಗಾಯಿಸಲಾಯಿತು. ಆರೋಪಿಗಳು ಮತ್ತು ಸಂತ್ರಸ್ತರು ಎರಡು ರಾಜ್ಯಗಳಲ್ಲಿ ನೆಲೆಸಿರುವುದರಿಂದ ಹೆಚ್ಚಿನ ತನಿಖೆಗೆ ಕಾನೂನು ಸಮಸ್ಯೆಗಳಿವೆಯೇ ಎಂಬ ಬಗ್ಗೆ ಕಾನೂನು ಸಲಹೆ ಪಡೆಯಲಾಗುವುದು. ಪ್ರಕರಣವನ್ನು ತಮಿಳುನಾಡು ಪೋಲೀಸರಿಗೆ ಹಸ್ತಾಂತರಿಸಬೇಕೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಈ ಪ್ರಕರಣದಲ್ಲಿ ತಮಿಳುನಾಡು ಪೋಲೀಸರು ಕೇರಳ ಪೋಲೀಸರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ವೇಳೆ ಶರೋನ್ ಗೆ ನೀಡಿದ್ದ ವಿಷದ ಬಾಟಲಿಯನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಗ್ರೀಷ್ಮಾಳ ಮನೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಗ್ರೀಷ್ಮಾಳ ಚಿಕ್ಕಪ್ಪ ವಿಷÀದ ಬಾಟಲಿಯನ್ನು ಪೋಲೀಸರಿಗೆ ನೀಡಿದ್ದಾರೆ.
ಗ್ರೀಷ್ಮಾಳ ಮನೆ ತಮಿಳುನಾಡಿನಲ್ಲಿ: ಕಾನೂನು ಸಲಹೆ ಪಡೆಯಲು ಮುಂದಾದ ಕೇರಳ ಪೋಲೀಸರು
0
ನವೆಂಬರ್ 01, 2022