ಬದಿಯಡ್ಕ: ಕುಂಬಳೆ ಉಪಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದು 217 ಅಂಕ ಗಳಿಸಿ ಉಪಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 4 ವಿದ್ಯಾರ್ಥಿಗಳು ಪ್ರಥಮ, 7 ಮಂದಿ ವಿದ್ಯಾರ್ಥಿಗಳು ದ್ವಿತೀಯ, 7 ಮಂದಿ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದು ಒಟ್ಟು 8 ಮಂದಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಪೋಷಕ ಆಹಾರ ತಯಾರಿಯಲ್ಲಿ ಫಾತಿಮ, ಉಪಯುಕ್ತ ವಸ್ತು ತಯಾರಿಯಲ್ಲಿ ಲಾವಣ್ಯ. ಎಂ., ಮರದ ಕಲಾಕೃತಿ ರಚನೆಯಲ್ಲಿ ಮಹಮ್ಮದ್ ಶಾನಿದ್, ಲೋಹದ ತಗಡಿನಿಂದ ಮಾದರಿ ತಯಾರಿಯಲ್ಲಿ ಅಬ್ದುಲ್ ಫರ್ಶೀನ್, ಕಸಿ ಕಟ್ಟುವುದರಲ್ಲಿ ಕೌಶಿಕ್ ಕೆ.ಬಿ., ಬಿದಿರಿನ ಉತ್ಪನ್ನ ದಲ್ಲಿ ತೇಜಸ್, ನಾರಿನ ಉತ್ಪನ್ನ ತಯಾರಿಯಲ್ಲಿ ಭಾಗ್ಯಶ್ರೀ, ಬೊಂಬೆ ತಯಾರಿಯಲ್ಲಿ ಮುಬಶಿರಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವರು. ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದ್ದಾರೆ.
ಪೆರಡಾಲ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
0
ನವೆಂಬರ್ 03, 2022
Tags