ನವದೆಹಲಿ: ಆಂಧ್ರಪ್ರದೇಶ ಮೂಲದ ಗಿರಿಧರ್ ಅರಮನೆ ಇಂದು (ನ.1) ರಕ್ಷಣಾ ಕಾರ್ಯದರ್ಶಿ ಆಗಿ ರಾಷ್ಟ್ರ ರಾಜಧಾನಿಯಲ್ಲಿ ಪದಗ್ರಹಣ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಮಾಡುವ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.
32 ವರ್ಷದಿಂದ ಸೇವೆಯಲ್ಲಿ ಇರುವ ಗಿರಿಧರ್, ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರದ ಅಡಿಯಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಹೊಸ ಸ್ಥಾನಕ್ಕೆ ಬರುವುದಕ್ಕೂ ಮೊದಲು ಅವರು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಆಗಿದ್ದರು.