HEALTH TIPS

ನೀರ್ಚಾಲು ವ್ಯಾಪಾರಿ ಘಟಕದ ರಜತ ಮಹೋತ್ಸವ, ಹಿರಿಯರಿಗೆ ಸನ್ಮಾನ: ಸಂಘಟನೆಯನ್ನು ಬೆಳೆಸುವಲ್ಲಿ ಪ್ರತಿಯೊಬ್ಬ ಸದಸ್ಯನ ಶ್ರಮ ಮಹತ್ತರ: ಕೆ.ಅಹಮ್ಮದ್ ಶರೀಫ್

            
         ಬದಿಯಡ್ಕ: ಸಂಘಟನೆಯ ನೆರಳಿನಲ್ಲಿ ಪರಸ್ಪರ ಸಹಕಾರೀ ಮನೋಭಾವದಿಂದ ಮುಂದುವರಿದಾಗ ನಮ್ಮ ಉದ್ದಿಮೆಯು ಪ್ರಗತಿಯತ್ತ ಸಾಗುವುದು. ನೀರ್ಚಾಲು ವ್ಯಾಪಾರಿ ಘಟಕವು ರಜತ ಮಹೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಸಂಘಟನೆಯನ್ನು ಬೆಳೆಸುವಲ್ಲಿಪ್ರತಿಯೊಬ್ಬ ಸದಸ್ಯನ ಶ್ರಮ ಇದೆ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶರೀಫ್ ಹೇಳಿದರು.
          ನೀರ್ಚಾಲು ವ್ಯಾಪಾರ ಭವನದಲ್ಲಿ ಬುಧವಾರ ನಡೆದ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ರಜತ ಮಹೋತ್ಸವ ಹಾಗೂ ಮಚೆರ್ಂಟ್ಸ್ ವೆಲ್‍ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
          ನೀರ್ಚಾಲು ಘಟಕದ ಅಧ್ಯಕ್ಷ  ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಹಂಸ ಪಾಲಕ್ಕಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಇಂದಿನ ಕಾಲದಲ್ಲಿ ಸಂಘಟನೆಯು ವ್ಯಾಪಾರಿಗಳಿಗೆ ಅನಿವಾರ್ಯವಾಗಿದೆ. ಪದಾಧಿಕಾರಿಗಳೊಂದಿಗೆ ಉತ್ತಮವಾದ ಹೊಂದಾಣಿಕೆಯಿಂದ ಸದಸ್ಯರು ಮುಂದುವರಿಯಬೇಕು. ಪ್ರತಿಯೊಬ್ಬ ಸದಸ್ಯನೂ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದಾಗ ಸಂಘಟನೆ ಬೆಳೆಯುತ್ತದೆ ಎಂದರು. ಜಿಲ್ಲಾ ಉಪಾಧ್ಯಕ್ಷ ಗಣೇಶ್ ವತ್ಸ, ರಾಜ್ಯ ಕೌನ್ಸಿಲರ್ ಕುಂಜಾರು ಮುಹಮ್ಮದ್ ಹಾಜಿ ಶುಭಾಶಂಸನೆಗೈದರು. ಕುಟುಂಬ ಮತ್ತು ವ್ಯಾಪಾರ ಎಂಬ ವಿಚಾರದಲ್ಲಿ ಗಂಗಾಧರ ಎಂ.ಕೆ.ಸೆಮಿನಾರ್ ನಡೆಸಿಕೊಟ್ಟರು.
                  ಹಿರಿಯ ವ್ಯಾಪಾರಿಗಳಿಗೆ ಸನ್ಮಾನ :
         ಅನೇಕ ವರ್ಷಗಳಿಂದ ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಯಾಗಿದ್ದು,  ಸಂಘಟನೆಯ ಸ್ಥಾಪಕ ಸದಸ್ಯ, ಪ್ರಸ್ತುತ ವಿಶ್ರಾಂತ ಜೀವನದಲ್ಲಿರುವ ಹಿರಿಯರಾದ ಕೃಷ್ಣ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಿ.ಎಚ್. ಆಲಿಕುಂಞÂ್ಞ, ವೆಂಕಟಕೃಷ್ಣ ಭಟ್ ಹೊಸಮನೆ, ನಾರಾಯಣ ಹೆಬ್ಬಾರ್ ಇವರನ್ನು ಗೌರವಿಸಲಾಯಿತು. ಅನೇಕ ವರ್ಷಗಳ ಕಾಲ ನೀರ್ಚಾಲು ಘಟಕದ ಕಚೇರಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಹಿರಿಯರಾದ ನಾರಾಯಣ ಶೆಟ್ಟಿ ಬೇಳ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಹತ್ತನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ನೀರ್ಚಾಲು ಘಟಕದ ಪ್ರಧಾನ ಕಾರ್ಯದರ್ಶಿ ರವಿ ನೀರ್ಚಾಲು ವರದಿ, ಖಜಾಂಜಿ ಪ್ರಶಾಂತ್ ಪೈ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಸತ್ಯಶಂಕರ ಭಟ್ ನಿರೂಪಿಸಿದರು. ಮಧ್ಯಾಹ್ನ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಸದಸ್ಯರಿಗೆ ರಜತ ಮಹೋತ್ಸವದ ಉಡುಗೊರೆಯನ್ನು ನೀಡಲಾಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries