ಪತ್ತನಂತಿಟ್ಟ: ಸಾಂಪ್ರದಾಯಿಕ ಅರಣ್ಯ ಮಾರ್ಗದ ಮೂಲಕ ಶಬರಿಮಲೆ ಯಾತ್ರೆ ನಿಯಂತ್ರಿಸಲು ಅರಣ್ಯ ಇಲಾಖೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ.
ಎರುಮೇಲಿಯಿಂದ ಶಬರಿಮಲೆಗೆ ತೆರಳುವ ಕಾನನ ಪಥದಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಯಾತ್ರಿಗಳಿಗೆ ಪೂರ್ಣಾವಧಿ ಪ್ರವೇಶವಿದ್ದ ಕಾನನ ಪಥದಲ್ಲಿ ವಿವಿಧೆಡೆ ಯಾತ್ರಾರ್ಥಿಗಳು ಸಂಚರಿಸಿ ಶಬರಿಮಲೆ ತಲಪುತ್ತಾರೆ. ರಾತ್ರಿ ಪ್ರಯಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದರಿಂದ ಯಾತ್ರಾರ್ಥಿಗಳು ರಾತ್ರಿ ವೇಳೆ ಕಾನನ ಮಧ್ಯೆ ಸಿಲುಕಿ ರಾತ್ರಿಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ತಂಗುದಾಣಗಳಿದ್ದರೂ ಹೆಚ್ಚಿನ ಯಾತ್ರಿಕರೂ ಅಂತಹ ನಿಲ್ದಾಣಗಳಿಗೆ ತಲಪದಿರುವುದು ಉಪಯೋಗಕ್ಕೆ ಲಭಿಸುತ್ತಿಲ್ಲ ಎನ್ನಲಾಗಿದೆ. ಅರಣ್ಯ ಇಲಾಖೆ ನಿಯಮಾವಳಿಗಳನ್ನು ಬಿಗಿಗೊಳಿಸುತ್ತಿರುವುದು ಅರಣ್ಯದ ರಸ್ತೆಗಳಲ್ಲಿ ಸಂಚಾರ ನಿಷೇಧ ನಂಬಿಕೆ-ವಿಶ್ವಾಸಗಳ ಮೇಲಿನ ಹತ್ತಿಕ್ಕುವ ಯತ್ನ ಎಂದು ಆರೋಪಿಸಲಾಗಿದೆ.
ಯಾತ್ರಾರ್ಥಿಗಳು ಶಬರಿಮಲೆಗೆ ಹೋಗಲು ಸಾಂಪ್ರದಾಯಿಕ ಕಾನನಪಥವನ್ನು ಶತಮಾನಗಳಿಂದಲೂ ಬಳಸುತ್ತಾರೆ. ಎರುಮೇಲಿಯ ಬಳಿಕ ಅಳುತ, ಮುಕ್ಕುಳಿ, ಕರಿಮಲ ಮೂಲಕ ಪಂಬಾಗೆ ತಲುಪುವ ಸಾಂಪ್ರದಾಯಿಕ ಮಾರ್ಗ ಕಾನನಪಥವಾಗಿದೆ. ಶಬರಿಮಲೆ ದೇವಸ್ಥಾನದಷ್ಟು ಹಳೆಯದಾದ ಈ ಸಾಂಪ್ರದಾಯಿಕ ಮಾರ್ಗಕ್ಕೆ 2018 ರಿಂದ ಅರಣ್ಯ ಇಲಾಖೆ ಹಾಗೂ ಪೋಲೀಸರು ನಿರ್ಬಂಧ ಹೇರಲು ಆರಂಭಿಸಿತು. ನಂತರ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ನಿರ್ಬಂಧಗಳನ್ನು ಬಿಗಿಗೊಳಿಸಲಾಯಿತು, ಮತ್ತು ಅರಣ್ಯ ಮಾರ್ಗದ ಮೂಲಕ ಯಾತ್ರೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.
ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾದ ಈ ವರ್ಷದ ಯಾತ್ರೆ ಸಾಂಪ್ರದಾಯಿಕ ಮಾರ್ಗದ ಮೂಲಕ ಪ್ರವೇಶಿಸುವ ಯಾತ್ರಾರ್ಥಿಗಳ ಮೇಲೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧಗಳನ್ನು ಹೇರುತ್ತಿದೆ. ಯಾತ್ರೆ ಆರಂಭದ ದಿನಗಳಲ್ಲಿ ಶುರುವಾದ ವಿವಾದ ಈಗಲೂ ಮುಂದುವರಿದಿದೆ. ಯಾತ್ರಾರ್ಥಿಗಳನ್ನು ಎರುಮೇಲಿಯಿಂದ ಕಾನನ ಪಥ ಪ್ರವೇಶಿಸುವ ಅರಣ್ಯ ಇಲಾಖೆಯ ಮೊದಲ ಚೆಕ್ ಪೆÇೀಸ್ಟ್ ಆಗಿರುವ ಕೊಯಿಕಾ ಕಾನನದಿಂದ ಬೆಳಿಗ್ಗೆ 4 ಗಂಟೆಯವರೆಗೆ, ಅಳುತದಿಂದ 12 ಗಂಟೆಯವರೆಗೆ ಮತ್ತು ಮುಕ್ಕುಳಿಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಯಾತ್ರಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಯಾತ್ರಾರ್ಥಿಗಳಿಗೆ ಪೂರ್ಣಾವಧಿಯ ಸಂಚಾರ ಸ್ವಾತಂತ್ರ್ಯವಿದ್ದ ಕಾನನ ಮಾರ್ಗದಲ್ಲಿ ಅರಣ್ಯ ಇಲಾಖೆ ಇಂತಹ ಕಟ್ಟುನಿಟ್ಟಿನ ನಿಬರ್ಂಧಗಳನ್ನು ಹೇರುತ್ತಿದೆ.
ಯಾತ್ರಾರ್ಥಿಗಳ ಭಕ್ತಿಸ್ತೋತ್ರ ಯಾತ್ರೆ ಬುಡಮೇಲುಗೊಳಿಸಲು ಹಿಂದಿನ ವರ್ಷಗಳಲ್ಲಿ ಕಾನನಪಥದಲ್ಲಿ ಅವಕಾಶ ಕಲ್ಪಿಸಿದ್ದ ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ವಿಧಿಸಿರುವ ವೇಳಾಪಟ್ಟಿಗನುಸಾರ ಸಂಚರಿಸುವ ಯಾತ್ರಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಕಾಳಕೆಟ್ಟಿಯಿಲ್, ಅಳುತ, ಕಲ್ಲಿಡಯಿಲ್ ಕುನ್ನು ಬೆಟ್ಟಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳನ್ನು ಕಾನನಪಥ ಯಾತ್ರಿಕರು ನಿರ್ವಹಿಸಬೇಕಾಗುತ್ತದೆ. ಜೊತೆಗೆ ಅರಣ್ಯ ಇಲಾಖೆ ನಿಗದಿಪಡಿಸಿದ ನಿಲ್ದಾಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗಿರುವುದರಿಂದ ಸಂಕಷ್ಟ ತೀವ್ರಸ್ವರೂಪ ಪಡೆಯುತ್ತಿದೆ ಎಂಬ ದೂರು ಕೇಳಿಬಂದಿದೆ.
ಶಬರಿಮಲೆ ಯಾತ್ರೆ; ಅರಣ್ಯ ಮಾರ್ಗದ ಸಂಚಾರ ಬಿಗಿಗೊಳಿಸಿದ ಅರಣ್ಯ ಇಲಾಖೆ: ಸಂಕಷ್ಟದಲ್ಲಿ ಭಕ್ತರು
0
ನವೆಂಬರ್ 29, 2022