ತಿರುವನಂತಪುರ: ಇ-ಪಿಒಎಸ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ರಾಜ್ಯದ ಕೆಲವೆಡೆ ಪಡಿತರ ವಿತರಣೆಯಲ್ಲಿ ಕಳೆದ ಎರಡು ದಿನಗಳಿಂದ ಭಾಗಶಃ ವ್ಯತ್ಯಯ ಉಂಟಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಜಿ. ಆರ್. ಅನಿಲ್ ಮಾಹಿತಿ ನೀಡಿದರು.
ಹೈದರಾಬಾದ್ ಎನ್‍ಐಸಿಯಲ್ಲಿ ಆಧಾರ್ ದೃಢೀಕರಣ ಸರ್ವರ್‍ನಲ್ಲಿ ತಾಂತ್ರಿಕ ದೋಷವು ಪಡಿತರ ವಿತರಣೆಯಲ್ಲಿ ಭಾಗಶಃ ಅಡಚಣೆಗೆ ಕಾರಣವಾಗಿದೆ. ಸಮಸ್ಯೆ ಬಗೆಹರಿದಿದ್ದು, ರಾಜ್ಯದಲ್ಲಿ ಪಡಿತರ ವಿತರಣೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ನಿನ್ನೆ 5,39,016 ಪಡಿತರ ಚೀಟಿದಾರರು ಪಡಿತರ ಪಾಲು ಪಡೆದಿದ್ದಾರೆ ಎಂದು ಹೇಳಲಾಗಿದೆ. ಸಂಜೆ 6ರವರೆಗೆ ಸುಮಾರು 4 ಲಕ್ಷ ಪಡಿತರ ಚೀಟಿದಾರರು ಪಡಿತರ ಪಾಲು ಪಡೆದಿದ್ದಾರೆ ಎಂದು ಸಚಿವರು ತಿಳಿಸಿದರು.
ಇ-ಪಿಒಎಸ್ ಯಂತ್ರದಲ್ಲಿ ತಾಂತ್ರಿಕ ದೋಷ ಸರಿಪಡಿಸಲಾಗಿದೆ: ರಾಜ್ಯದಲ್ಲಿ ಪಡಿತರ ವಿತರಣೆ ಯಥಾಸ್ಥಿತಿಗೆ
0
ನವೆಂಬರ್ 17, 2022