ಕಾಸರಗೋಡು: ಯು.ಎ.ಇ.ಗೆ ದುಬೈ ಗಡಿನಾಡ ಉತ್ಸವಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ ಕನ್ನಡ ಭವನ ಮತ್ತು ಗ್ರಂಥಾಲಯದ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಅವರನ್ನು ಯು.ಎ.ಇ. ಮಾರ್ಗದೀಪ ಸಾಂಸ್ಕøತಿಕ ಸಮಿತಿ ಹಾಗು ಯು.ಎ.ಇ. ರಾಮಕ್ಷತ್ರಿಯ ಸಂಘ ಜಂಟಿಯಾಗಿ ಸಮ್ಮಾನಿಸಿ ಗೌರವಿಸಿತು.
ಕೋರ್ನಿಕ್ ಡೆಲೀಶಿಯಸ್ ಕೋಸ್ಟಲ್ ರೆಸ್ಟೋರೆಂಟ್ ಸಭಾ ಭÀವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ ಯು.ಎ.ಇ. ಅಧ್ಯಕ್ಷ ಸತೀಶ್ ಹಂಗ್ಳೂರು ವಹಿಸಿದ್ದರು. ಮಾರ್ಗದೀಪ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಸುಗಂಧಿ ರಾಜ್ ಬೇಕಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಪಮ್ಮಿ ಕೊಡಿಯಾಲ್‍ಬೈಲ್ ಶುಭಾಶಂಸನೆಗೈದರು. ರಾಮಕ್ಷತ್ರಿಯ ಸಂಘ ಕಾರ್ಯದರ್ಶಿ ಸವಿತಾ ಉಪ್ಪೂರು, ಮಾರ್ಗದೀಪ ಕಾರ್ಯದರ್ಶಿ ಧೀರಜ್ ಮಲ್ಲಿಗೆಮಾಡು, ಬೀನಾ ಹಂಗ್ಳೂರು, ಸಜಯಾ ಸಂದೀಪ್, ಗೋಪೇಶ್ ಮಂಗಳೂರು, ಕಾರ್ತಿಕ್ ಕಾಸರಗೋಡು ಉಪಸ್ಥಿತರಿದ್ದರು. ಪ್ರಭಾಕರ್ ಅಂಬಲ್ತೆರೆ ಸಮ್ಮಾನಿತರನ್ನು ಪರಿಚಯಿಸಿದರು. ಮಂಜುನಾಥ್ ಕಾಸರಗೋಡು ಸ್ವಾಗತಿಸಿದರು. ಅಜಿತ್ ಕಾಸರಗೋಡು ವಂದಿಸಿದರು. ಶ್ರೀನಿವಾಸ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.
ಸಂಧ್ಯಾರಾಣಿ ಟೀಚರ್‍ಗೆ ದುಬೈಯಲ್ಲಿ ಸಮ್ಮಾನ
0
ನವೆಂಬರ್ 25, 2022