ಕಾಸರಗೋಡು: ಪೋಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸುವ ಅನೇಕ ಮಾದರಿ ಕಾರ್ಯಗಳು ನಡೆಯುತ್ತಿದ್ದರೂ ಬೆರಳೆಣಿಕೆಯಷ್ಟು ಜನರ ಕಾರ್ಯಗಳು ಇಡೀ ಪೋಲೀಸ್ ಇಲಾಖೆಗೆ ಕಳಂಕ ತಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಸಮಾಜಕ್ಕೆ, ಪೆÇಲೀಸ್ ಇಲಾಖೆಗೆ ಹಿತವಲ್ಲದ ಕೆಲಸ ಮಾಡುವವರ ಮೇಲೆ ಕರುಣೆ, ದಯೆ ತೋರಲು ಸಾಧ್ಯವಿಲ್ಲ ಎಂದರು.
ಕಾಸರಗೋಡು ಮಹಿಳಾ ಪೋಲೀಸ್ ಠಾಣೆ, ಸೈಬರ್ ಕ್ರೈಂ ಪೆÇಲೀಸ್ ಠಾಣೆ, ಮೇಲ್ಪರಂಬ ಪೆÇಲೀಸ್ ಠಾಣೆ ಹಾಗೂ ಬೇಕಲ ಉಪ ವಿಭಾಗೀಯ ಪೆÇಲೀಸ್ ಕಛೇರಿಯ ಶಂಕುಸ್ಥಾಪನೆಯನ್ನು ಆನ್ ಲೈನ್ ಮೂಲಕ ನಿನ್ನೆ ನೆರವೇರಿಸಿ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಪೋಲೀಸ್ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಬದಲಾವಣೆಯನ್ನು ತರಲು ಸರ್ಕಾರ ಯಶಸ್ವಿಯಾಗಿದೆ. ದೇಶದ ಪೋಲೀಸ್ ಪಡೆಗೆ ಹಲವು ರೀತಿಯಲ್ಲಿ ಮಾದರಿಯಾಗಲು ಕೇರಳ ಪೋಲೀಸರು ಸಮರ್ಥರಾಗಿದ್ದಾರೆ. ಕಾನೂನು ಸುವ್ಯವಸ್ಥೆ ನಿರ್ವಹಣೆ, ವೈಜ್ಞಾನಿಕ ಅಪರಾಧ ತನಿಖೆ, ಸೈಬರ್ ಪ್ರಕರಣದ ತನಿಖೆಯಲ್ಲಿ ಕೇರಳ ಪೋಲೀಸರು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಕೆಲವರ ಕೃತ್ಯಗಳಿಂದ ಹೆಮ್ಮೆಯ ಪಡೆ ತಲೆಬಾಗುವ ಅನಿವಾರ್ಯತೆ ಎದುರಾಗಿದೆ ಎಂದ ಅವರು, ಕಳಂಕಿತ ಚಟುವಟಿಕೆಯಲ್ಲಿ ತೊಡಗುವವರಿಂದ ನಾಚಿಕೆಗೇಡಿನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪೂರ್ಣ ಪೋಲೀಸ್ ಪಡೆ, ಪೆÇಲೀಸ್ ಪಡೆಯ ಭಾಗವಾಗಿ ಕೆಲಸ ಮಾಡಲು ಅಂತವರು ಅರ್ಹರಲ್ಲ ಎಂದರು.
ಕಾಸರಗೋಡು ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಕೇಂದ್ರ ಕಛೇರಿಯ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂದರು ಮ್ಯೂಸಿಯಂ, ಪುರಾತತ್ವ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ವಹಿಸಿದ್ದರು. ಅಪರಾಧ ತನಿಖೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕೇರಳ ಪೆÇಲೀಸರು ಸೂಕ್ಷ್ಮ ತನಿಖಾ ಕೌಶಲ್ಯದಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆಯ ಶಿಲಾಫಲಕ ಹಾಗೂ ಸೈಬರ್ ಕ್ರೈಂ ಪೆÇಲೀಸ್ ಠಾಣೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಡಿವೈಎಸ್ಪಿ (ಎಸ್‍ಎಂಎಸ್ ಪೆÇಲೀಸ್ ಠಾಣೆ) ವಿಶ್ವಂಭರನ್ ನಾಯರ್, ವಿಶೇಷ ಬ್ರಾಂಚ್ ಡಿವೈಎಸ್ಪಿ ಪಿ.ಕೆ.ಸುಧಾಕರನ್, ಸೈಬರ್ ಪೋಲೀಸ್ ಠಾಣೆ ಎಸ್.ಎಚ್. ಓ.ಕೆ.ಪ್ರೇಮಸದನ್, ಕಾಸರಗೋಡು ಮಹಿಳಾ ಪೋಲೀಸ್ ಠಾಣೆ ಎಸ್‍ಎಚ್‍ಒ ಪಿ.ಚಂದ್ರಿಕಾ, ಮಧೂರು ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಕಬೀರ್, ಮಧೂರು ಪಂಚಾಯಿತಿ ಸದಸ್ಯೆ ಎಂ.ಸ್ಮಿತಾ, ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಸತೀಶ್ ಕುಮಾರ್ ಅಳಕಲ್, ಕೆ.ಪಿಒಎ ಕಾಸರಗೋಡು ಕಾರ್ಯದರ್ಶಿ ಎಂ.ಸದಾಶಿವನ್, ಕೆಪಿಎ ಕಾಸರಗೋಡು ಕಾರ್ಯದರ್ಶಿ ಎ.ಪಿ.ಸುರೇಶ್. ಹಾಗೂ ಇತರರು ಮಾತನಾಡಿದರು.ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪಿ.ಕೆ.ರಾಜು ಸ್ವಾಗತಿಸಿ, ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ ಡಿವೈಎಸ್ಪಿ ಸಿಎ ಅಬ್ದುಲ್ ರಹೀಮ್ ವಂದಿಸಿದರು.