ಬದಿಯಡ್ಕ: ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಚೆರ್ಕಳದಲ್ಲಿ ಜರಗಿದ ಜಿಲ್ಲಾಮಟ್ಟದ ಶಾಸ್ತ್ರೋತ್ಸವ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ಸಂಜನಾ ಕೆ ಎಸ್ ಮತ್ತು ಮಾನಸ ಎಚ್ ಕೆ ವಿಜ್ಞಾನ ಮೇಳದ ರಿಸರ್ಚ್ ಟೈಪ್ ಪ್ರೊಜೆಕ್ಟ್ ನಲ್ಲಿ ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಗಣಿತ ಮೇಳದ ಗ್ರೂಪ್ ಪ್ರೊಜೆಕ್ಟ್ ನಲ್ಲಿ ಧನ್ಯ ಗಣೇಶ್ ಮತ್ತು ಧನುಶ್ರೀ ಜಿ ಕೆ ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ವೃತ್ತಿ ಪರಿಚಯ ಮೇಳದ ಸ್ಟಫ್ಡ್ ಟಾಯ್ಸ್ ಸ್ಪರ್ಧೆಯಲ್ಲಿ ದೀಕ್ಷಾ ಜೆ 9ನೆ ತರಗತಿ ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಕಾರ್ಡ್ ಅಂಡ್ ಸ್ಟ್ರಾ ಬೋರ್ಡ್ ಉತ್ಪನ್ನಗಳ ಸ್ಪಧೆರ್Éಯಲ್ಲಿ 10ನೆ ತರಗತಿಯ ಹರೀಶ್ ವಿ ರೈ ‘ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ, ಶಿಕ್ಷಕ ವೃಂದ ಅಭಿನಂದಿಸಿದರು.
ಮಹಾಜನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
0
ನವೆಂಬರ್ 06, 2022
Tags