ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ ವಠಾರದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಕ್ರಿಯಾ ಸಮಿತಿ ವತಿಯಿಂದ ಶಾಲಾ ವಠಾರದಲ್ಲಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಯಿತು.
ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ ಮುನೀರ್ ಧರಣಿ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ವಕೀಲ ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಖಾಲಿದಿ, ಸಿಪಿಐಎಂ ಸ್ಥಳೀಯ ಕಾರ್ಯದರ್ಶಿ ಕೆ.ಸುನೀಲ್ ಕುಮಾರ್, ಐಎನ್‍ಟಿಯುಸಿ ಮುಖಂಡ ಹರೀಂದ್ರನ್ ಇರಕೋಡನ್, ನಗರಸಭೆ ಸದಸ್ಯರಾದ ಹೇಮಲತಾ ಜೆ. ಶೆಟ್ಟಿ ಅಶ್ವಿನಿ ಜಿ. ನಾಯ್ಕ್, ಮುಖಂಡರಾದ ಪಿ.ರಮೇಶ್, ಎಂ.ಎಂ.ಮುನೀರ್, ಶ್ರೀಧರ ಗುರುಸ್ವಾಮಿ, ಟಿ.ಕೆ.ಮಹಮ್ಮದ್ ಕುಞÂ, ಎ.ಕೇಶವ್, ಎ.ಟಿ.ನಾಯ್ಕ್, ಮದರ್ ಪಿಟಿಎ ಅಧ್ಯಕ್ಷ ಕೆ. ಸೀಮಾ, ಶಾಲ ಮುಖ್ಯ ಶಿಕ್ಷಕಿ ಕೆ.ಎ.ಯಶೋಧ, ಶಿಕ್ಷಕರು ಉಪಸ್ಥೀತರಿದ್ದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೆ.ಆರ್.ಹರೀಶ್ ಸ್ವಾಗತಿಸಿದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆ ವಠಾರದಲ್ಲಿ ಅಂಡರ್‍ಪಾಸ್ ನಿರ್ಮಾಣ ಅನಿವಾರ್ಯವಾಗಿದ್ದು, ಬೇಡಿಕೆ ಈಡೇರುವಲ್ಲಿ ವರೆಗೆ ಹೋರಾಟ ಮುಂದುವರಿಸುವುದಾಗಿ ಕ್ರಿಯಾಸಮಿತಿ ಪದಾಧಿಖಾರಿಗಳು ತಿಳಿಸಿದ್ದಾರೆ.
ಅಡ್ಕತ್ತಬೈಲ್ ಶಾಲೆ ವಠಾರದಲ್ಲಿ ಅಂಡರ್‍ಪಾಸ್-ಕ್ರಿಯಾ ಸಮಿತಿಯಿಂದ ಧರಣಿ
0
ನವೆಂಬರ್ 10, 2022