ತಿರುವನಂತಪುರ: ಕೇರಳ ವಿಶ್ವವಿದ್ಯಾಲಯದ ವಿಸಿ ಅವರು ರಾಜ್ಯಪಾಲರಿಗೆ ವಿವರಣೆ ನೀಡಿರುವರು. ಕೇರಳದ ವಿಸಿ ಮಹದೇವನ್ ಪಿಳ್ಳೈ ವಿವರಣೆ ನೀಡಿ ಮರು ನೇಮಕದ ನ್ಯಾಯಯುತೆಯನ್ನು ಬಲಗೊಳಿಸಲು ಪ್ರಯತ್ನಿಸಿರುವರು.
ವಿಸಿ ಆಗಲು ಅಗತ್ಯ ಅರ್ಹತೆ ಇದೆ ಎಂದು ಕುಲಪತಿಗಳಿಗೆ ಮಹದೇವನ್ ಪಿಳ್ಳೆ ಉತ್ತರಿಸಿರುವರು. ನಿಯಮಾನುಸಾರ ವಿಸಿ ಸ್ಥಾನಕ್ಕೆ ಬಂದಿರುವುದಾಗಿಯೂ ತಿಳಿಸಿದ್ದಾರೆ.
ವಿ.ಪಿ.ಮಹದೇವನ್ ಪಿಳ್ಳೈ ಅವರು ಕಳೆದ ತಿಂಗಳು 24ರಂದು ನಿವೃತ್ತರಾಗಿದ್ದರು.ಮಹದೇವನ್ ಪಿಳ್ಳೆ ಅವರಿಗೆ ರಾಜ್ಯಪಾಲರು ನೋಟಿಸ್ ಕೂಡ ನೀಡಿದ್ದರು. ಇದಾದ ಬಳಿಕ ವಿಸಿ ಮಾನದಂಡದ ಪ್ರಕಾರ ನೇಮಕಾತಿ ನಡೆದಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದರು. ರಾಜ್ಯಪಾಲರ ಸೂಚನೆಯನ್ನು ನಿರ್ಲಕ್ಷಿಸಿದ ವಿಸಿಗಳಿಗೆ ನೊಟೀಸ್ ಕಳುಹಿಸಿದ್ದು, ವಜಾ ಮಾಡದಿರಲು ಕಾರಣವೇನು ಎಂದು ವಿವರಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಕೇರಳ ವಿಸಿ ವಿವರಣೆ ನೀಡಿದ್ದಾರೆ. ರಾಜೀನಾಮೆ ಕೋರಿಕೆಯನ್ನು ನಿರ್ಲಕ್ಷಿಸಿದ ವಿಸಿಗಳ ವೇತನವನ್ನು ವಸೂಲಿ ಮಾಡಲಾಗುವುದು ಎಂದು ರಾಜ್ಯಪಾಲರು ಘೋಷಿಸಿರುವರು. ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ವಿಸಿ ನೇಮಕಾತಿ: ರಾಜ್ಯಪಾಲರಿಗೆ ವಿವರಣೆ ನೀಡಿದ ಕೇರಳ ವಿಸಿ: ಅರ್ಹತೆ ಇದೆ ಎಂದ ಮಹದೇವನ್ ಪಿಳ್ಳೈ
0
ನವೆಂಬರ್ 03, 2022
Tags