ಬದಿಯಡ್ಕ: ಶಬರಿಮಲೆಯ ಪ್ರಧಾನ ಅರ್ಚಕರಾಗಿ ನೇಮಕಗೊಂಡ ಬ್ರಹ್ಮಶ್ರೀ ಕೆ. ಜಯರಾಮ ನಂಬೂದಿರಿ ಅವರನ್ನು ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಭೇಟಿಯಾಗಿ ಬದಿಯಡ್ಕದ ಶಬರಿಗಿರಿಯಲ್ಲಿ ನೂತನವಾಗಿ ನಿರ್ಮಿಸುವ ಶ್ರೀ ಅಯ್ಯಪ್ಪ ಮಂದಿರದ ಮನವಿ ಪತ್ರ ನೀಡಿ ಟ್ರಸ್ಟಿನ ಪರವಾಗಿ ಶಾಲು ಹೊದಿಸಿ ಗೌರವಿಸುವುದರೊಂದಿಗೆ ಆಶೀರ್ವಾದವನ್ನು ಪಡೆಯಲಾಯಿತು.
ನರೇಂದ್ರ ಬಿ.ಎನ್, ರಾಮಣ್ಣ ರೈ ವಳಮಲೆ, ಪುಷ್ಪರಾಜ ಆಚಾರ್ಯ ಬದಿಯಡ್ಕ, ಗೋಪಾಲಕೃಷ್ಣ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.
ಬದಿಯಡ್ಕ ಶಬರಿಗಿರಿ ಅಯ್ಯಪ್ಪ ಮಂದಿರ ಪದಾಧಿಕಾರಿಗಳಿಂದ ನಿಯೋಜಿತ ತಂತ್ರಿಗಳ ಭೇಟಿ
0
ನವೆಂಬರ್ 09, 2022