ಕಾಸರಗೋಡು: ಶಬರಿಮಲೆಯ ನಿಯೋಜಿತ ಮುಖ್ಯ ಅರ್ಚಕ ಬ್ರಹ್ಮಶ್ರೀ ಕೊಟ್ಟಾರಂ ಜಯರಾಮ ನಂಬೂದಿರಿ ನ. 7ರಂದು ಬೆಳಗ್ಗೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವರು. ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕನರಾಗಿ ನಿಯುಕ್ತರಾಗುತ್ತಿದ್ದಂತೆ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಜಯರಾಮ ನಂಬೂದಿರಿ ಅವರು, ದೇಗುಲ ಭೇಟಿ ಹಿನ್ನೆಲೆಯಲ್ಲಿ ಮಧೂರಿಗೆ ಆಗಮಿಸಲಿದ್ದಾರೆ. ಶ್ರೀದೇವರ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವಾಪಸಗಲಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಶಬರಿಮಲೆ ನಿಯೋಜಿತ ಮುಖ್ಯ ಅರ್ಚಕ ನಾಳೆ ಮಧೂರು ಭೇಟಿ
0
ನವೆಂಬರ್ 05, 2022