ನವದೆಹಲಿ: ದೇಶದಲ್ಲಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನೋಂದಣಿಯೂ ಬೇಕಾಗಿಲ್ಲ, ಪರವಾನಗಿಯ ಅಗತ್ಯವೂ ಇಲ್ಲ. ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ 25 ಕೆಎಂಪಿಎಚ್ (ಕಿಲೋಮೀಟರ್ ಪರ್ ಅವರ್) ಗಿಂತ ಕಡಿಮೆಯಿದ್ದರೆ ಮತ್ತು ವಾಹನದ ವಿದ್ಯುತ್ ಉತ್ಪಾದನೆ 250 ವ್ಯಾಟ್ಸ್‌ಗಿಂತ ಕಡಿಮೆಯಿದ್ದರೆ, ಮೋಟಾರು ವಾಹನ ಕಾಯಿದೆ ಪ್ರಕಾರ ಅದನ್ನು ಯಾರು ಬೇಕಾದರೂ ಪರವಾನಗಿ/ನೋಂದಣಿ ಇಲ್ಲದೆಯೇ ಭಾರತದಲ್ಲಿ ಓಡಿಸಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಗದಲ್ಲಿ ಬರುವ ಇಂತಹ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ.
ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಇ5: ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಇ5 ಸ್ಕೂಟರ್ 250-ವ್ಯಾಟ್ ಎಲೆಕ್ಟ್ರಿಕ್ ಹಬ್ ಮೋಟರ್ ಹೊಂದಿದೆ. ಫ್ಲೋರ್‌ಬೋರ್ಡ್‌ನಲ್ಲಿ ಇರುವ ಲಿಥಿಯಂ- ಐಯಾನ್/ ಲೀಡ್-ಆಸಿಡ್ ಬ್ಯಾಟರಿ ಪ್ಯಾಕನ್ನು 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದಲ್ಲದೆ, ಪ್ರತಿ ಚಾರ್ಜ್‌ಗೆ 55 ಕಿಮೀ ಓಡಿಸಬಹುದು. ಗರಿಷ್ಠ ವೇಗ ಗಂಟೆಗೆ 42 ಕಿಮೀ.
ಕ್ರೇಯಾನ್ ಎನ್ವಿ: ಕ್ರೇಯಾನ್ ಮೋಟಾರ್ಸ್ ತನ್ನ ಮುಂದಿನ ಉತ್ಪನ್ನವಾದ ಕ್ರೇಯಾನ್ ಎನ್ವಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಮಧ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದು ಕಂಪನಿಯ ಎರಡನೇ ಕಡಿಮೆ ವೇಗದ ಪ್ರೀಮಿಯಂ ಇ-ಸ್ಕೂಟರ್. ಕ್ರೇಯಾನ್ ಮೋಟರ್ಸ್ ಎನ್ವಿ ಕಡಿಮೆ ವೇಗದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರನ್ನು ರೂ. 64,000 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಓಕಿನಾವಾ ಲೈಟ್: ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯಾದ ಓಕಿನಾವಾದ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿಮೀ.; ಇದು 250 ವ್ಯಾಟ್ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 60 ಕಿಮೀ ಚಲಿಸುವ ಸಾಮರ್ಥ್ಯ ಹೊಂದಿದೆ.
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಇ-2: ಹೀರೋ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 25 ಕಿಮೀ ವೇಗ ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 50-60 ಕಿಮೀವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಫ್ಲಾೃಷ್ ಇ2 48 ವೋಲ್ಟ್ 28 ಎಎಚ್ ಲಿಥಿಯಂ ಆಯಾನ್ ಬ್ಯಾಟರಿಯಿಂದ ಚಾಲಿತವಾಗಿರುವ 250 ವ್ಯಾಟ್ ಮೋಟಾರ್‌ನಿಂದ ಚಲಿಸುತ್ತದೆ.
ಆಂಪಿಯರ್ ರಿಯೊ ಎಲೈಟ್: ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 250 ವ್ಯಾಟ್ ಎಬಿಎಲ್‌ಡಿಸಿ ಹಬ್ ಮೋಟಾರ್ ಅಳವಡಿಸಲಾಗಿದೆ. ಇದು ಗಂಟೆಗೆ 25 ಕಿಮೀ ಗರಿಷ್ಠ ವೇಗವನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 60 ಕಿಮೀ ದೂರವನ್ನು ಕ್ರಮಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಲಿಥಿಯಂ-ಐಯಾನ್ ಮತ್ತು ಲೀಡ್-ಆಸಿಡ್ ಬ್ಯಾಟರಿಗಳು ಲಭ್ಯವಿವೆ.