ಮೆದುಳು....ಮನುಷ್ಯರಿಗೆ ಅತ್ಯಂತ ಮುಖ್ಯವಾದ ಅಂಗ. ಮೆದುಳು ಇಲ್ಲದಿದ್ದರೆ
ಮನುಷ್ಯನೇ ಇಲ್ಲ. ಮೆದುಳು ನಿಷ್ಕ್ರಿಯವಾದರೆ ಮನುಷ್ಯ ಇದ್ದು ಸತ್ತಂತೆ. ಯಾಕೆಂದರೆ
ಮನುಷ್ಯನ ಎಲ್ಲಾ ಚಟುವಟಿಕೆಗಳು ಆತನ ಮೆದುಳಿನ ಮೇಲೆ ನಿಂತಿದೆ. ಆದರೆ ಇತ್ತೀಚಿನ
ದಿನಗಳಲ್ಲಿ ಮನುಷ್ಯನ ಮೆದುಳಿಗೆ ಸಮಸ್ಯೆ ಉಂಟಾಗುತ್ತಿದೆ. ಕೆಲಸದ ಒತ್ತಡ ಇನ್ನಿತರ
ಒತ್ತಡದಿಂದ ಮನುಷ್ಯನ ಮೆದುಳಿನಲ್ಲಿ ಸಮಸ್ಯೆ ಉಂಟಾಗುತ್ತಿದೆ. ಹೌದು, ಸಂಶೋಧನೆಯ
ಪ್ರಕಾರ, ಭಾರತದಲ್ಲಿ ಬ್ರೈನ್ ಸ್ಟ್ರೋಕ್ ಹೆಚ್ಚುತ್ತಿದೆಯಂತೆ.
ಬ್ರೈನ್ ಸ್ಟ್ರೋಕ್ ಗೆ ಯುವ ಜನರು ಬಲಿಯಾಗುತ್ತಿದ್ದಾರೆ ಮತ್ತು ಬ್ರೈನ್ ಸ್ಟ್ರೋಕ್
ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆಯಂತೆ. ಜಾಗತಿಕವಾಗಿ ಸುಮಾರು 20 ಮಿಲಿಯನ್
ಜನರು ಪ್ರತಿ ವರ್ಷ ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದಾರೆ, ಅವರಲ್ಲಿ 5 ಮಿಲಿಯನ್
ಜನರು ರೋಗದಿಂದ ಬದುಕಲು ಸಾಧ್ಯವಿಲ್ಲವಂತೆ. ಈ ರೀತಿಯ ಮೆದುಳಿನ ಸಮಸ್ಯೆಗೆ ನಾವು
ಮೆದುಳಿಗೆ ಕೊಡುವ ಹೊರೆಯೇ ಕಾರಣ, ಎಲ್ಲಿಯವರೆಗೆ ತನಗೆ ಆ ಹೊರೆಯನ್ನು ತಡೆದುಕೊಳ್ಳಲು
ಆಗುತ್ತದೆ. ಅಲ್ಲಿವರೆಗೆ ಮೆದುಳು ತಡೆಯುತ್ತದೆ. ಆಗದಿದ್ದರೆ ಸಮಸ್ಯೆಗಳು
ಸಂಭವಿಸುತ್ತದೆ. ಇದರಲ್ಲಿ ಮುಖ್ಯವಾಗಿರುವುದು ಬ್ರೈನ್ ಸ್ಟ್ರೋಕ್.
ಹಾಗಾದರೆ ಮೆದುಳಿನ ಮೇಲಿನ ಹೊರೆ ಕಡಿಮೆ ಮಾಡಲು ನಾವು ಏನು ಮಾಡಬೇಕು..? ಇಲ್ಲಿವೆ
ಸಲಹೆಗಳು.
ಬ್ರೈನ್ ಸ್ಟ್ರೋಕ್ ಎಂದರೇನು?
ಮಿದುಳಿಗೆ
ಸರಬರಾಜಾಗುತ್ತಿರುವ ರಕ್ತ ಸಂಚಾರದಲ್ಲಿ ಅಡಚಣೆಯಿಂದ ಪಾರ್ಶ್ವವಾಯು ಉಂಟಾಗಿ ಮಿದುಳಿನ
ಚಟುವಟಿಕೆಯನ್ನೇ ಕುಂಠಿತಗೊಳಿಸುತ್ತದೆ. ಬ್ಲಾಕೇಜ್ ಅಥವಾ ಹೆಮರೇಜ್ ಕಾರಣದಿಂದಾಗಿ ರಕ್ತ
ಸರಬರಾಜು ಕಡಿಮೆಯಾಗಬಹುದು. ಇದರಿಂದ ಪಾಶ್ವವಾಯು ಸಂಭವಿಸುತ್ತದೆ. ಇದನ್ನು ಬ್ರೈನ್
ಸ್ಟ್ರೋಕ್ ಎಂದು ಕರೆಯುತ್ತಾರೆ. ಮೆದುಳಿನ ಸ್ಟ್ರೋಕ್ ಗೆ ಪ್ರಮುಖ ಕಾರಣವೆಂದರೆ
ಆಮ್ಲಜನಕದ ಕೊರತೆಯಾಗಿದೆ. ಇನ್ನು ಪಾಶ್ವವಾಯು ಸಂಭವಿಸಿದಾಗ ರೋಗಿಗಳು ಸಾಮಾನ್ಯವಾಗಿ
ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಮತ್ತು ಸ್ಮರಣೆಯಲ್ಲಿನ ದೊಡ್ಡ
ಅಡಚಣೆಗಳಿಂದಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಾರೆ.
ಸಂಶೋಧನೆಯ ಪ್ರಕಾರ, ಭಾರತದಲ್ಲಿ ಬ್ರೈನ್ ಸ್ಟ್ರೋಕ್ ಯುವಜನರಲ್ಲಿ ಸಾವು ಮತ್ತು
ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ ಸುಮಾರು 20 ಮಿಲಿಯನ್ ಜನರು ಪ್ರತಿ
ವರ್ಷ ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದಾರೆ, ಅವರಲ್ಲಿ 5 ಮಿಲಿಯನ್ ಜನರು
ಸಾವನಪ್ಪುತ್ತಿದ್ದಾರೆ. ಇಂತಹ ತೀವ್ರ ಸ್ಥಿತಿಗೆ ಹಲವು ಕಾರಣಗಳಿದ್ದರೂ, ಜಡ ಜೀವನಶೈಲಿ,
ಕೆಟ್ಟ ಆಹಾರ ಪದ್ದತಿ ಮತ್ತು ವ್ಯಾಯಾಮ ಇಲ್ಲದೆ ಇರುವುದು ಈ ರೋಗಕ್ಕೆ ಪ್ರಮುಖ ಕಾರಣ
ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಮೆದುಳಿನ ಮೇಲಿನ ಹೊರೆಯನ್ನು ಕಡಿಮೆ ಮಾಡಿ
ಮತ್ತು ಆರೋಗ್ಯಕರ ಜೀವನವನ್ನು ನಡೆಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು.
ಬ್ರೈನ್ ಸ್ಟ್ರೋಕ್ ಲಕ್ಷಣಗಳು ಯಾವುವು..?
ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ವ್ಯಸನಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಹೃದಯ
ಸಂಬಂಧಿ ಕಾಯಿಲೆ ಇರುವವರು ಬ್ರೈನ್ ಸ್ಟ್ರೋಕ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅದಾಗ್ಯೂ
ಈ ರೀತಿಯ ಲಕ್ಷಣಗಳು ಕಂಡುಬಂದರೆ ಕೂಡಲೇ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಮುಖದ ಒಂದು ಭಾಗವು ಜೋತಾಡುತ್ತಿದ್ದರೆ ಅಥವಾ ಮರಗಟ್ಟಿದ ಅನುಭವವಾದರೆ ತಕ್ಷಣವೇ ಗಮನ
ನೀಡಿ. ನಿಮಗೆ ಸಮಸ್ಯೆ ಇದೆ ಎಂದು ಅನಿಸಿದರೆ ಕೂಡಲೇ ಆಸ್ಪತ್ರೆಗೆ ತೆರಳಿ. ಪಾರ್ಶ್ವವಾಯು
ಉಂಟಾದಾಗ ಮಾತು ಅಸ್ಪಷ್ಟವಾಗಿರುತ್ತದೆ. ಅವರಲ್ಲಿ ಸರಳವಾದ ಪ್ರಶ್ನೆಗಳನ್ನು ಕೇಳಿ.
ಸಾಮಾನ್ಯವಾಗಿ ಅವರಿಗೆ ಸರಿಯಾಗಿ ಉತ್ತರಿಸಲು ಆಗುವುದಿಲ್ಲ. ವ್ಯಕ್ತಿಯು
ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆಯೇ ಇಲ್ಲವೇ ಎಂದು ಗಮನಿಸಲು ಆ ಪ್ರಶ್ನೆಗಳನ್ನು
ಪುನರಾವರ್ತಿಸಿ. ಕಾರಣವಿಲ್ಲದೆ ತಲೆನೋವು ಉಂಟಾಗುವುದು. ಇದು ಸಾಮಾನ್ಯವಾಗಿ ಹೆಮರೇಜ್
ಸ್ಟ್ರೋಕ್‌ನ ಲಕ್ಷಣಗಳು. ಇನ್ನಿತರ ಲಕ್ಷಣಗಳೆಂದರೆ ಅಲ್ಪಾವಧಿಯ ಮರೆಗುಳಿತನ, ದೃಷ್ಟಿಯ
ದುರ್ಬಲತೆ, ತಲೆ ಸತ್ತುವುದು ಇವುಗಳು ಲಕ್ಷಣಗಳಾಗಿದೆ.
ಹಾಗಾದರೆ ಮೆದುಳಿನ ಆರೈಕೆ ಹೇಗೆ ಮಾಡಬೇಕು.?
ಮೆದುಳಿಗೆ ಬೀಳುವ ಹೊರೆಯನ್ನು ತಪ್ಪಿಸುವ ಮೂಲಕ ಮೆದುಳನ್ನು ನಾವು ಸರಿಯಾಗಿ ಆರೈಕೆ
ಮಾಡಬಹುದು.
1.ನಿಮಗೆ ಸಾಧ್ಯವಾದಷ್ಟು ಸಕ್ರಿಯವಾಗಿರಿ!
ಮನುಷ್ಯ ಸಕ್ರಿಯವಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹೀಗಾಗಿ ನೀವು ಯಾವಾಗಲೂ
ಸಕ್ರಿಯವಾಗಿರಿ. ಹೆಚ್ಚಿನ ಮಟ್ಟದ ಏರೋಬಿಕ್ ಫಿಟ್ ನೆಸ್ ವೇಗವಾದ ಮಾಹಿತಿ ಸಂಸ್ಕರಣೆ
ಮತ್ತು ಸಂರಕ್ಷಿತ ಮೆದುಳಿನ ಅಂಗಾಂಶದ ಪರಿಮಾಣದೊಂದಿಗೆ ಸಂಬಂಧಿಸಿದೆ.ಹೀಗಾಗಿ ಜಾಸ್ತಿ
ಏರೋಬಿಕ್ ಮಾಡಿ.
2.ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ!
ಸ್ಥೂಲಕಾಯತೆಯು ಮೆದುಳಿಗೆ ಸಂಬಂಧಪಟ್ಟಿಗೆ. ಇದು ನಿಮ್ಮ ಮೆದುಳನ್ನು ಕಳಪೆಗೊಳಿಸುತ್ತದೆ.
ಮಲ್ಟಿಪಲ್ ಸ್ಕ್ಲೆರೋಸಿಸ್ನಂತಹ ಅನೇಕ ಮೆದುಳಿಗೆ ಸಂಬಂಧಿಸಿದ ಪರಿಸ್ಥಿತಿಗಳಿಗೆ
ನಮ್ಮನ್ನು ಗುರಿಯಾಗಿಸುತ್ತದೆ. ಹೀಗಾಗಿ ಸ್ಥೂಲಕಾಯತೆಯಿಂದ ತಪ್ಪಿಸಿಕೊಳ್ಳಿ. ಯಾವಾಗಲೂ
ಆರೋಗ್ಯವಾಗಿರಿ.
3.ನಿಮ್ಮ ಮನಸ್ಸನ್ನು ಸಕ್ರಿಯವಾಗಿರಿಸಿಕೊಳ್ಳಿ
ಶಿಕ್ಷಣ, ಓದುವಿಕೆ, ಹವ್ಯಾಸಗಳು ಮತ್ತು ಕಲಾತ್ಮಕ ಅಥವಾ ಸೃಜನಶೀಲ ಕಾಲಕ್ಷೇಪಗಳು
ಜೀವಿತಾವಧಿಯಲ್ಲಿ ಅನುಸರಿಸಿದಾಗ ಅರಿವಿನ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಹೌದು, ಮೈಂಡ್ ಅನ್ನು ನೀವು ಆಕ್ಟೀವ್ ಆಗಿ ಇಟ್ಟಷ್ಟು ಮೈಂಡ್ ಶಾರ್ಪ್ ಆಗುತ್ತದೆ.
ಅಲ್ಲದೇ ನಿತ್ಯ ಕೆಲಸವು ಮೈಂಡನ್ನು ಚೆನ್ನಾಗಿ ಇಡುತ್ತದೆ.
4.ಧೂಮಪಾನದಿಂದ ದೂರವಿರಿ!
ಧೂಮಪಾನ ಮತ್ತು ಮೆದುಳಿಗೆ ಅವಿನಾಭಾವ ಸಂಬಂಧವಿದೆ. ಸಿಗರೆಟ್ ಸೇವನೆಯು ಮೆದುಳಿನ ಪ್ರಮಾಣ
ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಮರುಕಳಿಸುವಿಕೆಯ ದರಗಳು, ಹೆಚ್ಚಿದ ಅಂಗವೈಕಲ್ಯ
ಪ್ರಗತಿ ಮತ್ತು ಹೆಚ್ಚು ಅರಿವಿನ ಸಮಸ್ಯೆಗಳು ಉಂಟಾಗುತ್ತದೆ. ಸಿಗರೇಟ್ ಮನುಷ್ಯನ
ಮೆದುಳನ್ನು ಮೆಲ್ಲ ಮೆಲ್ಲಗೆ ಹಾಳು ಮಾಡುತ್ತದೆ.
5. ಔಷಧಿ ಸೇವಿಸಿ!
ಮೆದುಳಿನ ಸಮಸ್ಯೆ ಸಂಬಂಧ ವೈದ್ಯರು ಯಾವುದಾದರು ಔಷಧಿಯನ್ನು ನೀಡಿದ್ದರೆ ಖಂಡಿತವಾಗ್ಲು
ಅದನ್ನು ಸೇವಿಸಿ ಈ ಮೂಲಕ ಮೆದುಳಿನ ಸಮಸ್ಯೆಯಿಂದ ದೂರ ಉಳಿದುಕೊಳ್ಳಬಹುದು.
ಉತ್ತಮ ಆಹಾರ ಪದ್ದತಿ ಅನುಸರಿಸಿ!
ಇಂದಿನ ಎಲ್ಲ ರೋಗಗಳಿಗೆ ಪ್ರಮುಖ ಕಾರಣ ಆಹಾರ ಪದ್ದತಿ. ಹೌದು, ಕೆಟ್ಟ ಆಹಾರ ಪದ್ದತಿಯಿಂದ
ನಿಮ್ಮ ಜೀವನವೇ ಹಾಳಾಗಬಹುದು. ಕೇವಲ ಬ್ರೈನ್ ಸ್ಟ್ರೋಕ್ ಮಾತ್ರವಲ್ಲ ಹಲವು ಕೆಟ್ಟ ಆಹಾರ
ಪದ್ದತಿಯಿಂದ ಉಂಟಾಗುತ್ತದೆ. ರಕ್ತದೊತ್ತಡ, ಮಧುಮೇಹ ಇನ್ನಿತರ ಸಮಸ್ಯೆಗಳು
ಉಂಟಾಗುತ್ತದೆ.
ವ್ಯಾಯಾಮ!
ವ್ಯಾಯಾಮ ಕೂಡ ಹಲವು ಆರೋಗ್ಯ ಸಮಸ್ಯೆಗಯನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ.
ಹೌದು, ನೀವು ನಿತ್ಯವು ವ್ಯಾಯಾಮ ಮಾಡಿದರೆ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ.
ಮೆದುಳು ಸೇರಿ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.