ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕಾಸರಗೋಡು ಇದರ ಕುಂಬಳೆ ಉಪಜಿಲ್ಲಾ ಘಟಕದ ಪ್ರತಿನಿಧಿ ಸಮಾವೇಶ ಇತ್ತೀಚೆಗೆ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರಗಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಪ್ರಶಾಂತ ಕುಮಾರ್, ಕಾರ್ಯದರ್ಶಿಯಾಗಿ ನವಪ್ರಸಾದ್, ಕೋಶಾಧಿಕಾರಿಯಾಗಿ ರಾಜು ಕಿದೂರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ವೆಂಕಟರಾಜ ವಿ ಹಾಗೂ ಡಾ.ಶ್ರೀಶ ಕುಮಾರ ಪಿ, ಜೊತೆ ಕಾರ್ಯದರ್ಶಿಗಳಾಗಿ ಶ್ಯಾಮ ರಂಜಿತ್ ಹಾಗೂ ಸ್ವಾತಿ ಕೆ.ವಿ ಆರಿಸಲ್ಪಟ್ಟರು. ನೂತನ ಪದಾಧಿಕಾರಿಗಳ ಕಾರ್ಯಕಾರಿ ಸಮಿತಿಗೆ ಅಧಿಕಾರ ಹಸ್ತಾಂತರ ನಡೆಯಿತು. ಜ್ಯೋತ್ಸ್ನಾ ಕಡಂದೇಲು ಸ್ವಾಗತಿಸಿ, ಶಿವಕುಮಾರ ಎಸ್ ವಂದಿಸಿದರು. ಸುಶೀಲ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಕುಂಬಳೆ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
0
ನವೆಂಬರ್ 05, 2022