ತಿರುವನಂತಪುರ: ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ ಬಹುದೊಡ್ಡ ಜವಾಬ್ದಾರಿ ಹೊತ್ತಿದ್ದು, ಕ್ಷೇತ್ರದ ಜನತೆಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿರುವರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಆಕಾಂಕ್ಷಿಗಳಿಗೆ ಸೀಟು ನೀಡುವುದಿಲ್ಲ ಮತ್ತು ಅಭ್ಯರ್ಥಿಗಳ ಆಯ್ಕೆಯು ಯಶಸ್ಸಿನ ಸಂಭವನೀಯತೆಯನ್ನು ಆಧರಿಸಿದೆ ಎಂದು ಅವರು ಹೇಳಿದರು. ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಧಾಕರನ್ ಸ್ಪಷ್ಟನೆ ನೀಡಿದ್ದಾರೆ.
ತನ್ನ ರಾಜಕೀಯ ಜೀವನದ ಮಧ್ಯೆ ವಿಶಿಷ್ಟ ಅನುಭವಗಳು ಮಹತ್ತರವಾದುದಾಗಿದೆ. ಘಾಸಿಗೊಂಡ ಎಸ್.ಎಫ್.ಐ ಕಾರ್ಯಕರ್ತನೋರ್ವನನ್ನು ಭುಜದಮೇಲೆ ಹೊಯ್ದದ್ದಂತಹ ಹಲವು ಘಟನಾವಳಿಗಳಿವೆ ಎಂದಿರುವರು. ಬ್ರಿನ್ನಿಯನ್ ಕಾಲೇಜಲ್ಲಿ ಗಾಯಗೊಂಡು ಬಿದ್ದಿದ್ದ ಎಸ್.ಎಫ್.ಐ ನೇತಾರ ಅಶ್ರಫ್ ನನ್ನು ಹೆಗಲಿಗೇರಿಸಿ ಆಸ್ಪತ್ರೆಗೆ ಒಯ್ದಿದ್ದೆ ಎಮದು ಸುಧಾಕರನ್ ತಿಳಿಸಿರುವರು.
ಕ್ಷೇತ್ರದ ಜನತೆಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ: ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಕೆ.ಸುಧಾಕರನ್
0
ನವೆಂಬರ್ 12, 2022