ಮಂಜೇಶ್ವರ: ಕೇರಳ ಸ್ಕೂಲ್ ಟೀಚರ್ ಅಸೋಸಿಯೇಷನ್ (ಕೆ ಎಸ್. ಟಿ. ಎ)ಮಂಜೇಶ್ವರ ಉಪಜಿಲ್ಲೆಯ 32ನೇ ವಾರ್ಷಿಕ ಸಮ್ಮೇಳನ ನ. 19 ರಂದು ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನದ ಭಾಗವಾಗಿ ಬೆಳಿಗ್ಗೆ 9:30ಕ್ಕೆ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನದ ಧ್ವಜಾರೋಹಣವನ್ನು ಉಪಜಿಲ್ಲಾ ಅಧ್ಯಕ್ಷ ಬೆನ್ನಿ ತೋಂಪುನೈಲ್ ನಿರ್ವಹಿಸುವರು. ಕೆ ಎಸ್ ಟಿ ಎ ರಾಜ್ಯ ಕಾರ್ಯದರ್ಶಿ ರಾಘವನ್.ಕೆ ಸಮ್ಮೇಳನವನ್ನು ಉದ್ಘಾಟಿಸುವರು. ಸಮ್ಮೇಳನದಲ್ಲಿ ಉಪಜಿಲ್ಲಾ ಕಾರ್ಯದರ್ಶಿ ರವೀಂದ್ರ ಯನ್, ಜಿಲ್ಲಾ ಜೊತೆಕಾರ್ಯದರ್ಶಿ ಶ್ಯಾಮ್ ಭಟ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ. ಬಿ, ಪ್ರಭಾಕರನ್, ಶ್ರೀಕುಮಾರ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ವಿಜಯ ಸಿ ಎಚ್, ವಿಜಯಕುಮಾರ್, ಲಲಿತ, ಅಶ್ರಫ್ ಮೊದಲಾದವರು ಶುಭಹಾರೈಸುವರು.
ಕೆ ಎಸ್ ಟಿ ಎ ಮಂಜೇಶ್ವರ ಉಪಜಿಲ್ಲಾ ವಾರ್ಷಿಕ ಸಮ್ಮೇಳನ ಜಿ ಎಚ್ ಎಸ್ ಎಸ್ ಬೇಕೂರಲ್ಲಿ ನಾಳೆ
0
ನವೆಂಬರ್ 17, 2022